ಅಬುಧಾಬಿ, ಅ. 07 (DaijiworldNews/SM): ಇಲ್ಲಿನ ಶೇಖ್ ಝಯ್ಯದ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ತಂಡದ ಗುರಿ ಬೆನ್ನಟ್ಟಲು ಚೆನ್ನೈ ವಿಫಲವಾಗಿದ್ದು, ಹತ್ತು ರನ್ ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ತಂಡ ಇಪ್ಪತ್ತು ಓವರ್ ಗಳಲ್ಲಿ ಹತ್ತು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಕೊಲ್ಕತ್ತಾ ಪರ ತ್ರಿಪಾಟಿ 81 ರನ್ ಗಳನ್ನು ಸಿಡಿಸಿದ್ದು ಬಿಟ್ಟರೆ ಉಳಿದಂತೆ ಯಾವೊಬ್ಬ ಆಟಗಾರ ಕೂಡ ನಿರೀಕ್ಷೆಯ ಪ್ರದರ್ಶನ ತೋರಲಿಲ್ಲ.
ಕೊಲ್ಕತ್ತಾ ನೀಡಿದ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭಿ ಲಭಿಸಿದೆ. ವಾಟ್ಸನ್ ಅರ್ಧ ಶತಕದೊಂದಿಗೆ ಆಟ ಮುಂದುವರೆಸಿದ್ದಾರೆ. ಅಂಬಾಟಿ ರಾಯುಡ್ 30 ರನ್ ಸಿಡಿಸಿ ತಂಡಕ್ಕೆ ನೆರವಾದರು.