ಅಬುದಾಬಿ, ಅ. 04 (DaijiworldNews/SM): ಕಳೆದ ಕೆಲವು ಪಂದ್ಯಗಳಲ್ಲಿ ಸತತ ಸೋಲಿನ ಕಹಿಯನ್ನೇ ಉಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಚೇತರಿಸಿಕೊಂಡಿದೆ. ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ ಹತ್ತು ವಿಕೆಟ್ ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಇಪ್ಪತ್ತು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಆರಂಭಿಕ ಆಟಗಾರ, ನಾಯಕ ರಾಹುಲ್ 63 ರನ್ ಸಿಡಿಸಿ ತಂಡಕ್ಕೆ ನೆರವಾದರು. ಉಳಿದಂತೆ ಮಾಯಾಂಕ್ 26, ಮಂದೀಪ್ 27, ಪೂರನ್ 33 ರನ್ ಗಳನ್ನು ಸಿಡಿಸಿ ತಂಡದ್ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳನ್ನು ಸಿಡಿಸಿತು.
ಈ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭಿಕ ಉತ್ತಮ ಪ್ರದರ್ಶ ನೀಡಿ ಗೆಲುವು ತಂದುಕೊಟ್ಟರು. ಪಂಜಾಬ್ ಬೌಲರ್ ಗಳನ್ನು ಮನ ಬಂಡಂಟೆ ಚಚ್ಚಿದರು. ವಾಟ್ಸನ್ 83 ರನ್ ಸಿಡಿಸಿದರೆ, ಫಾಫ್ ಡ್ಯುಪ್ಲೆಸಿಸ್ ೮೭ ರನ್ ಚಚ್ಚಿದರು. ಆ ಮೂಲಕ 17.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 181 ರನ್ ಗಳನ್ನು ಸಿಡಿಸಿ ಚೆನ್ನೈ ಗೆಲುವಿನ ನಗೆ ಚೆಲ್ಲಿತು.