ಅಬುಧಾಬಿ, ಅ. 01 (DaijiworldNews/SM): ಐಪಿಎಲ್ ನಲ್ಲಿ ರನ್ ಚೇಸಿಂಗ್ ಮಾಡಲು ವಿಫಲವಾಗುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ರನ್ ಪೇರಿಸಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೂ ಕೂಡ ಪರದಾಡಿದೆ.
ಇಲ್ಲಿನ ಶೇಖ್ ಝಯೆದ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಗೆಲ್ಲಲು ಮುಂಬೈ ತಂಡ 192 ರನ್ ಗಳ ಗುರಿ ನೀಡಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಪರ ನಾಯಕ ಉತ್ತಮ ಪ್ರದರ್ಶನ ನೀಡಿದರು. 45 ಎಸೆತಗಳಲ್ಲಿ 70ರನ್ ಗಳನ್ನು ಸಿಡಿಸಿದರು. ಆದರೆ, ಡಿ ಕಾಕ್ ಮತ್ತೊಂಮ್ಮೆ ಎಡವಿದರು. ಸೂರ್ಯ ಕುಮಾರ್ ಯಾದವ್ 10, ಇಶಾನ್ ಕಿಶಾನ್ 28 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ ಹಾಗೂ ಪೊಲಾರ್ಡ್ ಅಬ್ಬರಿಸಿದರು. 20 ಎಸೆತಗಳನ್ನು ಎದುರಿಸಿದ ಪೊಲಾರ್ಡ್ 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 47 ರನ್ ಗಳನ್ನು ಸಿಡಿಸಿದರು. ಇನ್ನು 11 ಎಸೆತಗಳನ್ನು ಎದುರಿಸಿದ ಪಾಂಡ್ಯ 3ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 30 ರನ್ ಗಳನ್ನು ಚಚ್ಚಿದರು. ಅಂತಿಮವಾಗಿ ಇಪ್ಪತ್ತು ಓವರ್ ಗಳಲ್ಲಿ ಮುಂಬೈ ತಂಡ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 191 ಸಿಡಿಸಿತು.
ಪಂಜಾಬ್ ಪರ ನಾಯಕ ರಾಹುಲ್ ಹದಿನೇಳು, ಅಗರ್ ವಾಲ್ 25, ನಿಕೋಲಸ್ ಪೂರನ್ 44 ರನ್ ಗಳನ್ನು ಸಿಡಿಸಿದರು.