ಅಬುಧಾಬಿ, ಸೆ. 28 (DaijiworldNews/SM): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯ ಟೈಯಾಗಿದ್ದು, ಸೂಪರ್ ಓವರ್ ನತ್ತ ಮುಖಮಾಡಿ ಅಂತಿಮವಾಗಿ ಆರ್ ಸಿಬಿ ಪಂದ್ಯ ಗೆದ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಯಲ್ಪಟ್ಟ ಆರ್ ಸಿಬಿ ತಂಡ ನಿಗಧಿತ 20 ಓವರ್ ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 201 ರನ್ ಗಳಿಸಿ ಮುಂಬೈ ತಂಡಕ್ಕೆ ೨೦೨ ರನ್ ಗಳ ಸವಾಲು ನೀಡಿತ್ತು. ಆರ್ ಸಿಬಿ ಪರ ದೇವದತ್ ಪಡಿಕ್ಕಲ್ 54, ಫಿಂಚ್ 52, ಎಬಿಡಿವಿಲಿಯರ್ಸ್ 55, ಶಿವಂ ದುಬೆ 27 ರನ್ ಸಿಡಿಸಿದರು.
ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಬೇಗನೆ ಫೆವೀಲಿಯನ್ ನತ್ತ ನಡೆದರು. ಅಂತಿಮವಾಗಿ ಕಿಶಾನ್ ಹಾಗೂ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ನಿಂದ ಇನ್ನೂರರ ಸನಿಹಕ್ಕೆ ತಲುಪಿತಾದರೂ, ಮ್ಯಾಚ್ ಟೈ ನಲ್ಲಿ ಮುಕ್ತಾಯಗೊಂಡಿತು. ಕಿಶಾನ್ ಶತಕದಂಚಿನಲ್ಲಿ ಎಡವಿ 99 ರನ್ ಗಳಿಸಿ ಫೆವೀಲಿಯನ್ ನತ್ತ ನಡೆದರು. ಪೊಲಾರ್ಡ್ 60 ರನ್ ಸಿಡಿಸಿದರು.
ಬಳಿಕ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಕೇವಲ ಆರು ರನ್ ಗಳನ್ನಷ್ಟೇ ಪೇರಿಸಿತು. ಸುಲಭ ಗುರಿ ಬೆನ್ನತ್ತಿದ್ದ ಆರ್ ಸಿಬಿ ತಂಡ ಹತ್ತು ರನ್ ಪೇರಿಸಿ ಗೆಲುವಿನ ನಗೆ ಚೆಲ್ಲಿತು.