ಅಬುಧಾಬಿ, ಸೆ. 24 (DaijiworldNews/SM): ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಗೆಲ್ಲಲು ಪಂಜಾಬ್ ತಂಡ 207 ರನ್ ಗಳ ಗುರಿಯನ್ನು ನಿಗದಿಪಡಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ, ಮಯಾಂಕ್ ಅಗರ್ವಲ್ 26 ರನ್ ಸಿಡಿಸಿದರೆ, ನಿಕೋಲಸ್ ಪೋರನ್ 17 ರನ್ ಸಿಡಿಸಿ ನಿರ್ಗಮಿಸಿದರು. ಬಳಿಕ ಮ್ಯಾಕ್ಸ್ ವೆಲ್ 5 ರನ್ ಗಳಿಗೆ ನಿರ್ಗಮಿಸಿದರು. ಆದರೆ, ನಾಯಕ ಕೆ.ಎಲ್. ರಾಹುಲ್ ಅಬ್ಬರಿಸಿ ಶತಕ ಸಿಡಿಸಿದರು. ಕನ್ನಡಿಗ ಬೆಂಗಳೂರು ಬೌಲರ್ ಗಳನ್ನು ಮನಬಂದಂತೆ ಚಚ್ಚಿದರು. ಅಂತಿಮವಾಗಿ 20 ಓವರ್ ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 206 ರನ್ ಗಳಿಸಿತು.