ಮುಂಬೈ, ಸೆ. 24 (DaijiworldNews/MB) : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ಹೃದಯಾಘಾತದಿಂದ ಗುರುವಾರ ಮುಂಬೈನಲ್ಲಿ ನಿಧನರಾದರು.
59 ವರ್ಷದ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಕ್ರಿಕೆಟ್ ವಿಶ್ಲೇಷಕರಾಗಿ ಸ್ಟಾರ್ ಸ್ಪೋರ್ಟ್ ಕಾಮೆಂಟೆಂಟರಿ ತಂಡದಲ್ಲಿದ್ದರು.
ಅವರು ಮುಂಬೈನ ಸೆವೆನ್ ಸ್ಟಾರ್ ಹೋಟೆಲ್ ಒಂದರಲ್ಲಿ ಇದ್ದರು.
ಪ್ರೋ. ಡೀನೋ ಎಂದೇ ಖ್ಯಾತಿ ಪಡೆದಿರುವ ಅವರು ತಮ್ಮ ಹಾಸ್ಯಭರಿತವಾದ ಕ್ರಿಕೆಟ್ ವಿಶ್ಲೇಷಣೆ ಮೂಲಕ ಭಾರತದಲ್ಲಿ ಹೆಸರುವಾಸಿಯಾಗಿದ್ದಾರೆ.
ಆಸ್ಟ್ರೇಲಿಯಾ ಪರ 52 ಟೆಸ್ಟ್, 164 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 245 ಪ್ರಥಮ ದರ್ಜೆ ಪಂದ್ಯ, 285 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು.