ಅಬುಧಾಬಿ, ಸೆ. 22 (DaijiworldNews/SM): ಹದಿಮೂರನೇ ಆವೃತ್ತಿಯ ಐಪಿಎಲ್ ಟುರ್ನಿಯ ನಾಲ್ಕನೇ ದಿನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ನಡುವೆ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ತಂಡ ಚೆನ್ನೈಗೆ ಗೆಲ್ಲಲು 217 ರನ್ ಗಳ ಬೃಹತ್ ಮೊತ್ತ ಗುರಿ ನೀಡಿತು. ರಾಜಸ್ಥಾನ ಪರ ಸ್ಟೀವನ್ ಸ್ಮಿತ್ 69, ಸ್ಯಾಮ್ಸನ್ 74 ರನ್ ಗಳಿಸಿದರೆ, ಅಂತಿಮ ಓವರ್ ಆಡಿದ ಭರ್ಜರಿ ಬ್ಯಾಟಿಂಗ್ ಮೂಲಕ 8 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 27 ರನ್ ಸಿಡಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ 217 ರನ್ ಗಳ ಬೃಹತ್ ರನ್ ಗುರಿ ನೀಡಿದೆ.