ನವದೆಹಲಿ, ಸೆ.15 (DaijiworldNews/SM): ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಸದಾಶಿವ್ ಪಾಟೀಲ್(86) ಅವರು ಮಂಗಳವಾರದಂದು ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಸದಾಶಿವ್ ಪಾಟೀಲ್ ಅವರು ಭಾರತದ ಪರ ಏಕೈಕ ಅಂತರಾಷ್ಟ್ರೀಯ ಪಂದ್ಯವನ್ನಷ್ಟೇ ಆಡಿದ್ದಾರೆ. 1955ರ ಡಿಸೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಸದಾಶಿವ್ ಮೈದಾನಕ್ಕಿಳಿದಿದ್ದರು. ಆ ಸಂದರ್ಭದಲ್ಲಿ 51 ರನ್ಗಳಿಗೆ ಎರಡು ವಿಕೆಟ್ ಪಡೆದಿದ್ದರು. ಅಲ್ಲದೆ, ಬ್ಯಾಟಿಂಗ್ ವಿಭಾಗದಲ್ಲಿ 14 ರನ್ ಬಾರಿಸಿದರು. ಅದುವೇ ಅವರ ಮೊದಲ ಹಾಗೂ ಕಡೇಯ ಅಂತರಾಷ್ಟ್ರೀಯ ಪಂದ್ಯವಾಗಿತ್ತು. ಆ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.
ಇನ್ನು ರಣಜಿಯಲ್ಲಿ ಮಹಾರಾಷ್ಟ್ರ ಸದಾಶಿವ್ ಮೈದಾನಕ್ಕಿಳಿದಿದ್ದಾರೆ. ಒಟ್ಟು 83 ವಿಕೆಟ್ ಪಡೆದಿದ್ದಾರೆ. 1952ರಿಂದ 1964ರವರೆಗೆ 36 ಪ್ರಥಮ ಪಂದ್ಯಗಳನ್ನಾಡಿದ್ದು, 866 ರನ್ ಸಿಡಿಸಿದ್ದಾರೆ. ಇನ್ನು ಈ ವಿಭಾಗದಲ್ಲಿ 38 ರನ್ಗಳಿಗೆ ಐದು ವಿಕೆಟ್ ಪಡೆದಿರುವುದು, ಇವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.