ಸೌತಾಂಪ್ಟನ್, ಸೆ 05 (DaijiworldNews/PY): ಶುಕ್ರವಾರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ಎರಡು ರನ್ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೊರೊನಾ ಹಿನ್ನೆಲೆ ಆರು ತಿಂಗಳ ಬಳಿಕ ರೋಸ್ಬೌಲ್ನ ಖಾಲಿ ಕ್ರೀಡಾಂಗಣ ಅಂತರಾಷ್ಟ್ರೀಯ ಪಂದ್ಯವಾಡಿದ ಆಸ್ಟ್ರೇಲಿಯಾ ತಂಡ 14 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು. 163 ರನ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಇನ್ನೇನು 14 ರನ್ಗಳು ಬೇಕಾಗಿದ್ದು, ಈ ವೇಳೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 26ರನ್ ಬೇಕಾಗಿತ್ತು. ಆದರೆ, ತಂಡ ಒಂದೂ ಬೌಂಡರಿಯನ್ನು ಬಾರಿಸಲಿಲ್ಲ.
ಆಸಿಸ್ ಪರ ನಾಯಕ ನಾಯಕ ಆ್ಯರನ್ ಫಿಂಚ್ (46) ಹಾಗೂ ಡೇವಿಡ್ ವಾರ್ನರ್ (58) ಜೊತೆಯಾಟವಾಡಿದರು. ಸ್ಟೀವನ್ ಸ್ಮಿತ್ (18) ರನ್ ಗಳಿಸಿ ಔಟಾಗಿದ್ದು, ಆಸ್ಟ್ರೇಲಿಯಾದ ರನ್ನಲ್ಲಿ ಕುಸಿತ ಕಂಡಿತು.
ಇನ್ನು ಇಂಗ್ಲೇಂಡ್ ಪರ ಡೇವಿಡ್ ಮಲಾನ್ (66) ಹಾಗೂ ಜೋಸ್ ಬಟ್ಲರ್ (44) ಜೊತೆಯಾಟದಲ್ಲಿ ಉತ್ತಮ ರನ್ ಕಲೆಹಾಕಿದ್ದು, 162 ರನ್ ಗಳಿಸಿತ್ತು. ಕ್ರಿಸ್ ಜೋರ್ಡಾನ್ ಔಟಾಗದೆ 14, ಗ್ಲೆನ್ ಮ್ಯಾಕ್ಸ್ವೆಲ್ 14ಕ್ಕೆ 2, ಕೇನ್ ರಿಚರ್ಡ್ಸನ್ (13ಕ್ಕೆ 2), ಆ್ಯಶ್ಟನ್ ಅಗರ್ (32ಕ್ಕೆ 2) ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 6 ವಿಕೆಟ್ಗೆ 160 (ಡೇವಿಡ್ ವಾರ್ನರ್ 58, ಆ್ಯರನ್ ಫಿಂಚ್ 46, ಮಾರ್ಕಸ್ ಸ್ಟೋನಿಸ್ ಔಟಾಗದೆ 23, ಜೋಫ್ರಾ ಆರ್ಚರ್ 33ಕ್ಕೆ 2, ಆದಿಲ್ ರಶೀದ್ 29ಕ್ಕೆ 2, ಮಾರ್ಕ್ ವುಡ್ (31ಕ್ಕೆ 1) ಆಡಿದ್ದಾರೆ.
ಎರಡನೇ ಟಿ-20 ಪಂದ್ಯವು ಭಾನುವಾರ ಇದೇ ಮೈದಾನದಲ್ಲಿ ನಡೆಯಲಿದೆ.