ನವದೆಹಲಿ, ಸೆ. 04 (DaijiworldNews/SM): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಗುಳಿಯಲು ಚೆನ್ನೈ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಲವು ಅಡೆ ತಡೆಗಳ ಬಳಿಕ ಯುಎಇಯಲ್ಲಿ ನಡೆಯುವ ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸದೇ ಇರುವುದಕ್ಕೆ ಕಾರಣ ತಿಳಿಸಿದ್ದಾರೆ. ತನ್ನ ಕೆಲವು ವೈಯುಕ್ತಿಕ ಕಾರಣದಿಂದಾಗಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದರ ಹೊರತಾಗಿ ಯಾವುದೇ ಕಾರಣ ಇಲ್ಲ ಎಂದಿದ್ದಾರೆ. ಈ ಬಗ್ಗೆ ಈಗಾಗಲೇ ಚೆನ್ನೈ ತಂಡದ ಆಡಳಿತ ವರ್ಗಕ್ಕೂ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.
ಇನ್ನು ಈಗಾಗಲೇ ಚೆನ್ನೈ ತಂಡದಿಂದ ರೈನಾ ಹೊರನಡೆದಿದ್ದಾರೆ. ಉಳಿದಂತೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಇತರ ಆಟಗಾರರು ಪರೀಕ್ಷೆಗೊಳಪಟ್ಟು ತರಬೇತಿ ಪಡೆಯುತ್ತಿದ್ದಾರೆ.