ನವದೆಹಲಿ, ಆ. 27 (DaijiworldNews/SM): ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಡ್ವೇನ್ ಬ್ರಾವೋ ಹೊಸ ದಾಖಲೆ ಬರೆದಿದ್ದಾರೆ. 500 ವಿಕೆಟ್ ಗಳನ್ನು ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಬ್ರಾವೋ ಪಾತ್ರರಾಗಿದ್ದಾರೆ.
36 ವರ್ಷದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಈ ಮಹತ್ವದ ಸಾಧನೆಗೈದಿದ್ದಾರೆ. ಟ್ರಿಬ್ಯಾಗೊ ನೈಟ್ ರೈಡರ್ಸ್ ಪರ ಆಡುತ್ತಿದ್ದ ಬ್ರಾವೋ, ಸೇಂಟ್ ಲೂಸಿಯಾ ಜೋಕ್ಸ್ ತಂಡದ ರಖೀಮ್ ಕಾರ್ನವಾಲ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇನ್ನು ಬ್ರಾವೋ ಅವರು 2012 ಮತ್ತು 2016 ರ ಟಿ-20 ವಿಶ್ವಕಪ್ ವಿಜೇತ ತಂಡದಲ್ಲಿದ್ದರು. ಅವರು 20ಕ್ಕೂ ಹೆಚ್ಚು ತಂಡಗಳಿಂದ ನೇಮಕವಾಗಿದ್ದು ಕಡಿಮೆ ಅವಧಿಯ ಕ್ರಿಕೆಟ್ ನಲ್ಲಿ 300 ಮತ್ತು 400 ವಿಕೆಟ್ ಗಳನ್ನು ಗಳಿಸಿದ ಮೊದಲ ಬೌಲರ್ ಎನಿಸಿದ್ದಾರೆ.