ಸೌದಿ, ಆ.27(DaijiworldNews/HR): ಬೈಶ್ ಗೈಸ್ ಸೌದಿ ಅರೇಬಿಯಾ ಇವರ ಆಶ್ರಯದಲ್ಲಿ ನಾಲ್ಕು ದಿನದ ಬೈಶ್ ಪ್ರೀಮಿಯರ್ ಲೀಗ್-2020 ಕ್ರಿಕೆಟ್ ಪಂದ್ಯಾಟ ಫೆನ್ಸ್ ಕ್ರಿಕೆಟ್ ಮೈದಾನ ಬೈಶ್ ಜಝಾನ್ನದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಟನೆಯನ್ನು ಯುನೈಟೆಡ್ ಟೆಕ್ ನ ಮಹಮ್ಮದ್ ಹ್ಯಾರಿಸ್ ಗೈದರು. ನಾಲ್ಕು ದಿನಗಳವರೆಗೆ ಸಾಗಿದ ಪಂದ್ಯಾಟದಲ್ಲಿ ಯುನೈಟೆಡ್, ವಳಾವೂರು ಫ್ರೆಂಡ್ಸ್, ಸ್ಟಾರ್ ಕಾವೂರು, ಎನ್ ಎನ್ ಸಿ, ಎಟಿಎಲ್ ಮತ್ತು ಇಬ್ದಾ ವಾರಿಯರ್ಸ್ ಸೇರಿ ಒಟ್ಟು ಆರು ತಂಡ ಭಾಗವಹಿಸಿದ್ದವು.
ಪಂದ್ಯಾಟ ನಡೆಯುವ ಎರಡು ದಿನ ಮುಂಚೆ ಹೋಟೆಲ್ ರೆಡ್ ಬ್ರಿಕ್ಸ್ ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ಮುಹಮ್ಮದ್ ಅವ್ಫಾರವರು ಅತೀ ಹೆಚ್ಚು ಮೊತ್ತಕ್ಕೆ ಸ್ಟಾರ್ ಕಾವೂರ ಪ್ರಾಂಚೈಸಿಯ ಪಾಲಾದರು. ಲೀಗ್ ಹಂತದ ಪಂದ್ಯದಿಂದ ಅಂಕ ಗಳಿಕೆಯ ಆದಾರದಲ್ಲಿ ಕೊನೆಯ ಎರಡು ತಂಡ ಟೂರ್ನಿಯಿಂದ ಹೊರಹೋಗಿ ನಾಲ್ಕು ತಂಡಗಳು ಕ್ವಾಲಿಪೀಯರ್ ಹಂತ ಪ್ರವೇಶಿಸಿದವು. ಕೊನೆಯಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಸ್ಟಾರ್ ಕಾವೂರು ತಂಡ ಯುನೈಟೆಡ್ ತಂಡವನ್ನು 8 ರನ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.
ಈ ಪಂದ್ಯಾಟದಲ್ಲಿ ಉತ್ತಮ ದಾಂಡುಗಾರನಾಗಿ ಆಸೀಫ್ ಸ್ಟಾರ್ ಕಾವೂರ್ ಹಾಗೂ ಉತ್ತಮ ಎಸೆತಗಾರನಾಗಿ ಇಬ್ರಾಹಿಮ್ ಯುನೈಟೆಡ್ ಮೂಡಿಬಂದರೆ, ಉತ್ತಮ ಗೂಟ ರಕ್ಷಕರಾಗಿ ಇಯಾಝ್ ಎನ್.ಎನ್.ಸಿ ಹಾಗೂ ಉತ್ತಮ ಕ್ಷೇತ್ರ ರಕ್ಷಕರಾಗಿ ಹಸನ್ ಯುನೈಟೆಡ್ ಪ್ರಶಸ್ತಿಯನ್ನು ಪಡೆದುಕೊಂಡರು. ಪಂದ್ಯದ ಐಕಾನ್ ಆಗಿ ಇಬ್ರಾಹಿಮ್ ಯುನೈಟೆಡ್ ಹೊರಹೊಮ್ಮಿದರೆ, ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಅವ್ಫಾ ಸ್ಟಾರ್ ಕಾವೂರ್ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ಟಾರ್ ಕಾವೂರ್ ತಂಡದ ನೂರ್ ಬಜಾಲ್ ರವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂದ್ಯಾಟ ನಂತರ ಸಮಾರೋಪ ಸಮಾರಂಭ ಕಾರ್ಯ ಕ್ರಮದಲ್ಲಿ ಯುನೈಟೆಡ್ ಟೆಕ್ ನ ಮಹಮ್ಮದ್ ಹ್ಯಾರಿಸ್ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಮ್ಮದ್ ಇರ್ಶದ್(ಕೋ ಅರ್ಡಿನೇಟರ್ ಎಟಿಎಲ್, ಕಾಂಟ್ರಾಕ್ಟಿಂಗ್, ಕೆಎಸ್ಎ),ಮಹಮ್ಮದ್ ಹಫೀಫ್ (ಮುಖ್ಯಸ್ಥರು ಪ್ರೊಟೆಕ್ಟ ಕಾಂಟ್ರಾಂಕ್ಟಿಂಗ್, ಕೆಎಸ್ಎ)ಅಬ್ದುಲ್ ಖಾದರ್ ಹಾಶಿಮ್(ಹೋಟೆಲ್ ಮಂಗಳೂರು ಡೈನ್, ಬೈಶ್) ಭಾಗವಹಿಸಿದ್ದರು.