ನವದೆಹಲಿ, ಆ. 21, (DaijiworldNews/SM): ಭಾರತ ಸರಕಾರ ಕ್ರೀಡಾ ಕ್ಷೇತ್ರದ್ದ ಸಾಧಕರಿಗೆ ನೀಡುವ ಕ್ರೀಡಾ ಸಾಧಕ ಪ್ರಶಸ್ತಿಗಳ ಪಟ್ಟಿ ಬಿಡುಗಡೆಗೊಳಿಸಿದೆ.
ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಇತರ ಕ್ರೀಡಾ ಕ್ಷೇತ್ರದ ನಾಲ್ವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕ್ರಿಕೆಟಿಗ ರೋಹಿತ್ ಶರ್ಮ, ಕುಸ್ತಿಪಟು ವಿನೇಶ್ ಫೋಗಾಟ್, ಪ್ಯಾರಾ ಅಥ್ಲಿಟ್ ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್ ಸ್ಟಾರ್ ಮನಿಕಾ ಬಾತ್ರಾ ಮತ್ತು ಹಾಕಿ ತಂಡದ ನಾಯಕ ರಾಣಿ ರಾಂಪಾಲ್ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ.
ಈ ನಡುವೆ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ, ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್, ದೀಪ್ತಿ ಶರ್ಮಾ ಸೇರಿದಂತೆ 27 ಮಂದಿ ಅರ್ಜುನ ಪ್ರಶಸ್ತಿಗೆ ಆಯ್ಕೆಯಗಿದ್ದಾರೆ.
ದ್ರೋಣಚಾರ್ಯ ಪ್ರಶಸ್ತಿಗೆ ಆರ್ಚರ್ ಕ್ಷೇತ್ರದ ಧರ್ಮೆಂದ್ರಾ ತಿವಾರಿ, ಅಥ್ಲೆಟಿಕ್ಸ್ ಕ್ಷೇತ್ರದ ಸಾಧನೆಗಾಗಿ ಪುರುಷೋತಮ್ ರೈ, ಬಾಕ್ಸಿಂಗ್ ಕ್ಷೇತ್ರದ ಸಾಧನೆಗಾಗಿ ಶಿವ ಸಿಂಗ್, ಇನ್ನು ಹಾಕಿಯಲ್ಲಿ ಮಾಡಿದ ಸಾಧನೆಗೆ ರೊಮೇಶ್ ಪೋಥನಿಯಾ ಸೇರಿದಂತೆ 8 ಮಂದಿ ಆಯ್ಕೆಯಾಗಿದ್ದಾರೆ.