ನವದೆಹಲಿ, ಆ. 19, (DaijiworldNews/SM): ಕ್ರಿಕೆಟ್ ನಲ್ಲಿ ಸಮರ್ಥ ನಾಯಕನಾಗಿ ಗುರುತಿಸಿಕೊಂಡು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿರುವ ಎಂ.ಎಸ್. ಧೋನಿಗೆ ಮೈದಾನದಿಂದ ಬೀಳ್ಕೊಡಲು ಬಿಸಿಸಿಐ ನಿರ್ಧರಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಗಳು "ಈ ಬಗ್ಗೆ ಬಿಸಿಸಿಐ ಧೋನಿ ಜೊತೆ ಮಾತನಾಡಲಿದೆ. ಅದರ ಬಳಿಕ ಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ನಡೆಯುವುದಿಲ್ಲ. ಐಪಿಎಲ್ ನಂತರ ಏನು ಮಾಡಬೇಕೆಂಬ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ದೇಶಕ್ಕಾಗಿ ಮಾಹಿ ಹಲವಾರು ಸಾಧನೆಗೈದಿದ್ದಾರೆ. ವಿಶ್ವಕಪ್ ಗಳನ್ನು ತಂದುಕೊಟ್ಟು, ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಗೌರವಿಸುವುದು ಧರ್ಮ ಎಂದಿದ್ದಾರೆ. ಯಾರೂ ಯೋಚಿಸಿರದ ಸಮಯದಲ್ಲಿ ಧೋನಿ ನಿವೃತ್ತಿ ಘೋಷಣೆ ಮಾಡಿದ್ದಾರೆಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.