ನವದೆಹಲಿ, ಆ. 18, (DaijiworldNews/SM): ಐಪಿಎಲ್ ಪ್ರಯೋಜಕತ್ವದಿಂದ ವೀವೋ ಹೊರ ನಡೆದ ಬಳಿಕ 2020ರ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಡ್ರೀಮ್ 11 ಪಡೆದುಕೊಂಡಿದೆ. ಚೇರ್ಮನ್ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಚೀನಾ ಮೂಲದ ಮೊಬೈಲ್ ಕಂಪೆನಿ ವಿವೋ ಐಪಿಎಲ್ ಪ್ರಾಯೋಕತ್ವದಿಂದ ಹೊರ ನಡೆದ ಬೆನ್ನಲ್ಲೇ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಭಾರಿ ಪೈಪೋಟಿ ಆರಂಭಗೊಂಡಿತ್ತು. ಆದರೆ ಇದೀಗ ಅಂತಿಮವಾಗಿ ಡ್ರೀಮ್ 11 ಸಂಸ್ಥೆ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.
ಈ ಬಗ್ಗೆ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಅವರು ಮಾಹಿತಿ ನೀಡಿರುವ ಬಗ್ಗೆ ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ. ಐಪಿಎಲ್ ಪ್ರಯೋಜಕತ್ವದಿಂದ ವೀವೋ ಹಿಂದೆ ಸರಿದ ಸಂದರ್ಭದಲ್ಲಿ ಆಯೋಜಕರಿಗೆ ಅಲ್ಪ ತಲೆನೋವಾಗಿ ಕಾಡಿತ್ತು. ಹೊಸ ಪ್ರಯೋಜಕರನ್ನು ಅಂತಿಮ ಹಂತದಲ್ಲಿ ಹುಡುಕುವ ಅನಿವಾರ್ಯತೆ ಎದುರಾಗಿತ್ತು. ಹೀಗಿರುವಾಗಲೇ ಪ್ರಾಯೋಜಕತ್ವಕ್ಕೆ ಬೇಡಿಕೆ ಬರಲಾರಂಬಿಸಿತ್ತು.
ಎಲ್ಲರನ್ನೂ ಹಿಂದಿಕ್ಕಿರುವ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. 222 ಕಂಪೆನಿಗಳನ್ನು ಹಿಂದಿಕ್ಕಿ ಡ್ರೀಮ್ 11 ಐಪಿಎಲ್ ಪ್ರಯೋಜಕತ್ವ ಪಡೆದುಕೊಂಡಿದೆ.