ನವದೆಹಲಿ, ಆ. 10, (DaijiworldNews/SM): ಹಲವು ಅಡೆತಡೆಗಳ ಬಳಿಕ ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಮೌಖಿಕವಾಗಿ ಅನುಮತಿಸಿರುವ ಕೇಂದ್ರ ಸರಕಾರದಿಂದ ಅಧಿಕೃತ ಆದೇಶ ಪ್ರತಿಯನ್ನು ಬಿಸಿಸಿಐ ಪಡೆದುಕೊಂಡಿದೆ.
ಆ ಮೂಲಕ ಟೂರ್ನಿ ಆಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದಂತಾಗಿದೆ. ಸಿದ್ಧತೆಗಳು ಹೆಚ್ಚಾಗಿವೆ. ಸರ್ಕಾರದಿಂದ ಅಧಿಕೃತ ಆದೇಶ ಪ್ರತಿ ಬಂದಿರುವುದನ್ನು ಐಪಿಎಲ್ನ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಬಹಿರಂಗಪಡಿಸಿದ್ದಾರೆ.
ಯುಎಇಯಲ್ಲಿ ಟೂರ್ನಿ ಆಯೋಜನೆಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದುಕೊಂಡಿದ್ದೇವೆ. ಈ ಮೂಲಕ ಸರ್ಕಾರ ಒಪ್ಪಿಗೆಯನ್ನು ನೀಡಿದೆ ಎಂದು ಐಪಿಎಲ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.