ನವದೆಹಲಿ, ಆ. 04 (DaijiworldNews/SM): ಯು ಎ ಇಯಲ್ಲಿ ಐಪಿಎಲ್ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಬಿಸಿಸಿಐಗೆ ಚೀನಾ ಶಾಕ್ ನೀಡಿದೆ. ಐಪಿಎಲ್ ಹದಿಮೂರನೇ ಆವೃತಿಯ ಪ್ರಾಯೋಜಕತ್ವದಿಂ ವಿವೋ ಹಿಂದಕ್ಕೆ ಸರಿದಿದ್ದು, ಬಿಸಿಸಿಐಗೆ ದೊಡ್ಡ ಹೊಡೆತವಾಗಿದೆ.
ಗಲ್ವಾನ್ ಕಣಿವೆಯಲ್ಲಿ ಚೀನಾ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಆ್ಯಪ್ ಹಾಗೂ ಸರಕುಗಳನ್ನು ಬ್ಯಾನ್ ಮಾಡಲಾಗಿದೆ. ಇದೇ ವೇಳೆ ಐಪಿಎಲ್ ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡುವ ಒತ್ತಡ ಕೇಳಿಬಂದಿತ್ತು. ಆದರೆ ಇದೀಗ ಚೀನಾ ಕಂಪನಿ ವಿವೋ ಅದರಂತೆ ನಡೆದುಕೊಂಡಿದೆ. ಈ ವರ್ಷ ಐಪಿಎಲ್ ಪ್ರಾಯೋಜಕರಾಗಿ ಹೊರಗುಳಿಯುವುದಾಗಿ ವಿವೋ ಬಿಸಿಸಿಐಗೆ ಮಾಹಿತಿ ನೀಡಿದೆ. ಇನ್ನು 440 ಕೋಟಿ ರೂ. ಬಹುದೊಡ್ಡ ಬಂಡವಾಳ ಇಲ್ಲಿ ಹೂಡಲಾಗಿದೆ. ಇದನ್ನು ಹಿಂತಿರುಗಿಸುವ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ.
ಕೊರೋನಾ ಮಹಾಮಾರಿ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗಲೇ ಅತ್ತ ಚೀನಾ ಸಂಸ್ಥೆ ವಿವೋ ಶೀರ್ಷಿಕೆ ಪ್ರಯೋಜಕತ್ವದಿಂದ ಹೊರಬಂದಿರುವುದು ಹೊಸ ತಲೆನೋವನ್ನುಂಟು ಮಾಡಿದೆ.