ನವದೆಹಲಿ, ಜು 31 (DaijiworldNews/SM): ಕೊರೊನಾ ಕಾರಣದಿಂದಾಗಿ ಐಪಿಎಲ್ ಟೂರ್ನಿ ಯುಎಇಯಲ್ಲಿ ಆಯೋಜನೆಗೊಳ್ಳುತ್ತಿದೆ. ಅದರೆ, ಕೊರೊನಾ ಕಾರಣದಿಂದ ಪ್ರೇಕ್ಷಕರನ್ನು ಸೇರಿಸುವುದು ಸ್ವಲ್ಪ ತಲೆನೋವಿನ ವಿಚಾರವಾಗಿದೆ. ಆದರೂ ಶೇ. 30-50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲು ಚಿಂತನೆ ನಡೆದಿದೆ.
ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಯುವುದು ಬಹುತೇಕ ಫೈನಲ್ ಆಗಿದೆ. ಈ ಕಾರಣದಿಂದಾಗಿ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡುವುದು, ಬಿಡುವುದು ಯುಎಇಗೆ ಬಿಟ್ಟಿದ್ದು ಎಂದು ಬಿಸಿಸಿಐ ಹೇಳಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಇ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮುಬಾಶೀರ್ ಉಸ್ಮಾನಿ ಅವರು, ಬಿಸಿಸಿಐ ಅಧಿಕೃತವಾಗಿ ನಮಗೆ ಏನು ಹೇಳಿಲ್ಲ. ಬಿಸಿಸಿಐ ಕೂಡ ಭಾರತದ ಕೇಂದ್ರ ಸರ್ಕಾರದ ಸೂಚನೆಗಾಗಿ ಕಾಯುತ್ತಿದ್ದಾರೆ ಎಂಬುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೋನಾದಿಂದಾಗಿ ಇದೀಗ ಯುಎಇಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಶೇ. 30ರಿಂದ 50ರಷ್ಟು ಜನ ಸೇರುವುದಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಐಪಿಎಲ್ ಪಂದ್ಯವಳಿಗಳು ನಡೆದಲ್ಲಿ ಅಷ್ಟೇ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ. ಆದರೆ, ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಾಗಿದ್ದು, ಎಲ್ಲವೂ ಭಾರತ ಸರಕಾರದ ನಿರ್ಧಾರವನ್ನು ಹೊಂದಿಕೊಂಡಿದೆ.