ನವದೆಹಲಿ, ಜು 29(DaijiworldNews/SM): ಕ್ರಿಕೆಟ್ ಜಗತ್ತಿನಲ್ಲಿ ಸಾಧನೆಯ ಶಿಖರವನ್ನು ತಲುಪಿ ಕ್ರಿಕೆಟ್ ದೇವರು ಎಣಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ದ್ವಿಶತಕ, ತ್ರಿಶತಕ ಸಿಡಿಸುವುದನ್ನು ಅಷ್ಟೊಂದು ಗಮನಿಸಿಲ್ಲ. ಅದೇ ಕಾರಣದಿಂದಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿರುವ ಬ್ಯಾಟ್ಸ್ಮನ್ಗಳ ಪೈಕಿ ಮಾಸ್ಟರ್ ಬ್ಲಾಸ್ಟರ್ ಟಾಪ್ 5 ಪಟ್ಟಿಯಲ್ಲಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡೀರುವ ಮಾಜಿ ಆಟಗಾರ ಕಪಿಲ್ ದೇವ್, "ಸಚಿನ್ ಹೊಂದಿರುವ ಪ್ರತಿಭೆಗಳನ್ನು ನಾನು ಬೇರೆ ಯಾರೊಬ್ಬರಲ್ಲೂ ನೋಡಿಲ್ಲ. ಅವರು ಶತಕಗಳನ್ನು ಗಳಿಸುವುದು ಹೇಗೆಂದು ತಿಳಿದಿದ್ದರು ಆದರೆ ಅದೇ ಶತಕವನ್ನು ದ್ವಿಶತಕ, ತ್ರಿಶತಕಗಳನ್ನಾಗಿ ಪರಿವರ್ತಿಸುವ ಬಗ್ಗೆ ಯೋಚಿಸಿಲ್ಲ. ದಾಖಲೆಗಳನ್ನು ಬರೆಯುವುದು ಸಚಿನ್ ಗೆ ಸುಲಭವಾಗಿತ್ತು. ಆದರೆ, ದ್ವಿಶತಕ, ತ್ರಿಶತಕ ಗಳಿಸುವುದು ಅಷ್ಟೊಂದು ಸುಲಭದ ವಿಚಾರವಾಗಿರಲಿಲ್ಲ ಎಂದು ಕಪಿಲ್ ದೇವ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ್ ದಾಖಲೆಯ 51 ಟೆಸ್ಟ್ ಶತಕಗಳನ್ನು ಭಾರಿಸಿದ್ದಾರೆ. ಆದರೆ, ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದಾರೆ. ಶತಕ ದಾಖಲಿಸುವುದು ಸಚಿನ್ ಅವರಿಗೆ ಸುಲಭವಾಗಿತ್ತು. ಆದರೆ, ಅದೇ ಶತಕವನ್ನು ದ್ವಿಶತಕವನ್ನಾಗಿಸುವುದು ಅವರಿಗೆ ತಿಳಿದಿರಲಿಲ್ಲ ಎಂದು ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.