ನವದೆಹಲಿ, ಜು 27(DaijiworldNews/SM): ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ ಐಪಿಎಲ್ 2020 ಆಯೋಜನೆ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಈ ಕುರಿತಂತೆ ಯುಎಇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ(ಬಿಸಿಸಿಐ) ಅಧಿಕೃತ ಒಪ್ಪಂದವನ್ನು ಸ್ವೀಕರಿಸಿದೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯುಎಇಯಲ್ಲಿ ಆಯೋಜನೆಗೊಂಡಿದ್ದು, ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಇದಕ್ಕೆ ಭಾರತ ಸರ್ಕಾರದಿಂದ ಅನುಮೋದನೆ ಬೇಕಾಗುತ್ತದೆ.
ಐಪಿಎಲ್ ಆಯೋಜನೆಗೆ ಸಂಬಂಧಿಸಿದಂತೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಬಿಸಿಸಿಐನಿಂದ ಅಧಿಕೃತ ಪತ್ರವನ್ನು ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿದೆ. ಬಿಸಿಸಿಐನಿಂದ ಅಧಿಕೃತ ಪತ್ರ ಪಡೆದುಕೊಳ್ಳಲಾಗಿದ್ದು, ಭಾರತ ಸರಕಾರದ ಅನುಮೋದನೆಗಾಗಿ ಎದುರುನೋಡಲಾಗುತ್ತಿದೆ ಎಂದು ಇಸಿಬಿ ತಿಳಿಸಿದೆ. ಈ ಬಗ್ಗ್ಗೆಭಾರತ ಸರಕಾರ ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ಆಂತಿಮವಾಗಿ ಅನುಮತಿಸುವ ಸಾಧ್ಯತೆ ಇದೆ.