ನವದೆಹಲಿ, ಜು 21(DaijiworldNews/SM): ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈ ನಡುವೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಜೂನ್ ತಿಂಗಳಲ್ಲಿ ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಏಕದಿನ ಸರಣಿ ಆಯೋಜನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಸರಣಿ ಆಯೋಜನೆಯಾಗಿತ್ತು. ಬಳಿಕ ಕೊರೊನಾ ಕಾರಣದಿಂದಾಗಿ ಸರಣಿ ಮುಂದೂಡಲ್ಪಟ್ಟಿತ್ತು.
ಆದರೆ ಕೊರೋನಾ ವೈರಸ್ ನಿಂದಾಗಿ ಈ ಟೂರ್ನಿ ಆಯೋಜನೆಯನ್ನು ಮುಂದೂಡಲಾಗಿತ್ತು. ಆದರೆ, ಭಾರತದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಟೀಂ ಇಂಡೀಯಾ ಸರಣಿಯಲ್ಲಿ ಭಾಗವಹಿಸುವುದು ಅಸಾಧ್ಯವಾಗಿದೆ. ಅಲ್ಲದೆ, ವನಿತಾ ತಂಡದ ಆಟಗಾರರಿಗೆ ಒಂದೆಡೆ ಸೇರಿಕೊಂಡು ಅಭ್ಯಾಸ ನಡೆಸಲು ಅಸಾಧ್ಯವಾಗಿರುವ ಕಾರಣದಿಂದಾಗಿ ಭಾರತ ಟೂರ್ನಿಯಿಂದ ಹೊರ ನಡೆಯಬೇಕಾದ ಅನಿವರ್ಯತೆ ಎದುರಾಗಿದೆ.
ಮಾರ್ಚ್ ಬಳಿಕ ಟೀಂ ಇಂಡಿಯಾದ ವನಿತಾ ತಂಡ ಯಾವುದೇ ಪಂದ್ಯವನ್ನಾಡಿಲ್ಲ. ಈ ಹಿನ್ನೆಲೆ ಯಾವುದೇ ಅಭ್ಯಾಸವಿಲ್ಲದೆ, ಏಕಾಏಕಿ ಅಂತರಾಷ್ಟ್ರೀಯ ಸರಣಿ ಆಡುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ತಂಡ ಸರಣಿಯಿಂದ ಹೊರನಡೆದಿದೆ.