ನವದೆಹಲಿ, ಜು. 13 (DaijiworldNews/SM): ಸದ್ಯ ಏಕದಿನ ಪಂದ್ಯಗಳಿಂದ ದೂರ ಉಳಿದುಕೊಂಡಿರುವ ಟೀಂ ಇಂಡಿಯ್ ಆಟಗಾರ ಅಜಿಂಕ್ಯಾ ರಹಾನೆ ಮತ್ತೆ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ತಂಡ ಸೇರಿಕೊಳ್ಳುವೆ ಎಂಬ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ರಹಾನೆ ಕೊನೆಯ ಬಾರಿಗೆ 2018 ರ ಫೆಬ್ರವರಿಯಲ್ಲಿ ಏಕದಿನ ಪಂದ್ಯ ಆಡಿದ್ದು, ಬಳಿಕ ಏಕದಿನ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ನಾನು ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ. ಆರಂಭಿಕ ಅಥವಾ ನಾಲ್ಕನೇ ಕ್ರಮಾಂಕದಲ್ಲೂ ಕೂಡ ಆಡಬಲ್ಲೆ. ಆದರೆ, ಯಾವ ಅವಕಾಶ ದೊರೆಯುತ್ತದೆ ಎಂಬುವುದು ಗೊತ್ತಿಲ್ಲ. ಈ ಕಾರಣದಿಂದಾಗಿ ಮತ್ತೆ ನಾನು ಏಕದಿನ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.