ಮುಂಬೈ, ಜು 11(DaijiworldNews/SM): ಟೀಂ ಇಂಡೀಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮಾದರಿ ನಡೆ ತೋರಿದ್ದಾರೆ. 35 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಸುನಿಲ್ ಗವಾಸ್ಕರ್, ತಮ್ಮ 71ನೇ ಹುಟ್ಟು ಹಬ್ಬದ ದಿನದಂದು ಈ ನಿರ್ಧಾರ ಕೈಗೊಂಡಿದ್ದಾರೆ. ಮಕ್ಕಳ ಹೃದಯ ಆರೈಕೆಯ ಶ್ರೀ ಸತ್ಯ ಸಾಯ್ ಸಂಜೀವಿನಿ ಹಾಸಪಿಟಲ್ನಲ್ಲಿ ಚಿಕಿತ್ಸೆ ಪಡೆಯಬೇಕಾದ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಿ ತಮ್ಮ ಹುಟ್ಟುಹಬ್ಬವನ್ನು ಅವಿಸ್ಮರಣಿಯವನ್ನಾಗಿಸಿದ್ದಾರೆ. ಈ ಹಿಂದೆಯೂ ಕೂಡ ಗವಾಸ್ಕರ್ ಈ ರೀತಿಯಲ್ಲಿ ಮಾನವೀಯ ನಡೆ ತೋರಿದ್ದರು.
ಮಕ್ಕಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿರುವ ಗವಾಸ್ಕರ್, ಮಕ್ಕಳು ಮನೆಯ ಸಂತಸವನ್ನು ಇಮ್ಮಡಿಗೊಳಿಸುತ್ತಾರೆ. ಮಕ್ಕಳಿಂದ ಭವಿಷ್ಯ ಉಜ್ವಲವಾಗುತ್ತದೆ. ಇಂತಹ ಕೆಲವು ಬಡಕುಟುಂಬದ ಮಕ್ಕಳು ಅನಾರೋಗ್ಯಕ್ಕೆ ತುತ್ತಾದ ಸಂದರ್ಭ ಅವರ ಚಿಕಿತ್ಸೆಗೆ ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳಿಗೆ ನೆರವಾಗಲು ನನ್ನದೊಂದು ಸಣ್ಣ ಪ್ರಯತ್ನವೆಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.