ಮುಂಬೈ, ಜು 04 (DaijiworldNews/PY): ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಫಿಟ್ನೆಸ್ ಫ್ರೀಕ್ ಆಗಿದ್ದು, ಇದರ ಬಗ್ಗೆ ಯಾವುದೇ ಅನುಮಾನವಿಲ್ಲ. ಪ್ರಪಂಚದಾದ್ಯಂತದ ಕೊರೊನಾ ನಡುವೆಯೂ, 31 ವರ್ಷದ ಬ್ಯಾಟ್ಸ್ಮನ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ವರ್ಕೌಟ್ ಮಾಡುತ್ತಿದ್ದಾರೆ.
ನಟಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈನ ಅಪಾರ್ಟ್ಮೆಂಟ್ನಲ್ಲಿ ತಂಗಿರುವ ಕೊಹ್ಲಿ, ಭಾರತದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಅವರು ಮಲ್ಟಿಪಲ್ ಪವರ್ ಸ್ನ್ಯಾಚ್ ರೆಪ್ಸ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದೀಗ ಮತ್ತೊಂದು ವರ್ಕೌಟ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ವಿರಾಟ್ ಅವರು, ತಾವು ಪ್ರತಿದಿನ ಮಾಡುವ ತಮ್ಮ ನೆಚ್ಚಿನ ವ್ಯಾಯಾಮ ಇದಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ನಾನು ಪ್ರತಿದಿನ ಮಾಡುವ ವ್ಯಾಯಾಮದಲ್ಲಿ ನನಗೆ ಪವರ್ ಸ್ನ್ಯಾಚ್ ಇಷ್ಟವಾದ ವ್ಯಾಯಾಮ ಎಂದು ಬರೆದುಕೊಂಡಿದ್ದಾರೆ.