ಕೊಚ್ಚಿ, ಜು 02 (DaijiworldNews/SM): ಐಪಿಎಲ್ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ಭೂತಕ್ಕೆ ಸಿಲುಕಿ ಸರಣಿಗಳಿಂದ ದೂರವಾಗಿದ್ದ ಶ್ರೀಶಾಂತ್ ಸದ್ಯ ದೋಷ ಮುಕ್ತರಾಗಿದ್ದು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2013ರಿಂದ ಕಳೆದ 7 ವರ್ಷಗಳ ಕಾಲ ಶ್ರೀಶಾಂತ್ ಕ್ರಿಕೆಟ್ ನಿಂದ ದೂರವಾಗಿದ್ದರು. ಇದೀಗ ಯಾವ ತಂಡ ಸೇರಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಫಿಕ್ಸಿಂಗ್ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದ ಶ್ರೀಶಾಂತ್ ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ. ಆದರೆ, ಮತ್ತೆ ಕ್ರಿಕೆಟ್ ಗೆ ಮರಳುವುದಕ್ಕೆ ಹಾತೊರೆಯುತ್ತಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎಸ್ ಶ್ರೀಶಾಂತ್ ಕಳೆದ ವರ್ಷ ಆರೋಪ ಮುಕ್ತರಾಗಿ ಹೊರಬಂದರಾದರೂ ಅವರ ವಿರುದ್ಧ ಬಿಸಿಸಿಐ ಹೇರಿದ್ದ ಆಜೀವ ನಿಷೇಧ ಮಾತ್ರ ಮುಂದುವರಿದಿತ್ತು.
ಇದರ ವಿರುದ್ಧವೂ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು. ಆ ಮೂಲಕ ನಿಷೇಧಿಯನ್ನು ಕಡಿಮೆಗೊಳಿಸುವಲ್ಲಿ ಸಫಲರಾಗಿದ್ದಾರೆ. ಆ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಶಾಂತ್ ಮತ್ತೆ ಕ್ರಿಕೆಟ್ ಗೆ ಕಮ್ ಬ್ಯಾಕ್ ಆಗಲಿದ್ದಾರೆ.