ಕೊಲಂಬೊ, ಜು. 01 (DaijiworldNews/SM): 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೇ ವಿಚಾರವನ್ನು ಶ್ರೀಲಂಕಾ ಬಲವಾಗಿ ತೆಗೆದುಕೊಂಡಿದೆ. ಅಲ್ಲದೆ, ಕ್ರಿಮಿನಲ್ ತನಿಖೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.
ಕ್ರೀಡಾ ಅಪರಾಧಗಳಿಗೆ ಸಂಬಂಧಿಸಿದ ಘಟಕವಾಗಿರುವ ಪೊಲೀಸ್ ನಿರ್ವಹಣೆಯ ಸ್ವತಂತ್ರ ವಿಶೇಷ ತನಿಖಾ ಘಟಕದಿಂದ ಕ್ರಿಮಿನಲ್ ವಿಚಾರಣೆ ಆರಂಭಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆ.ಡಿ.ಎಸ್. ರುವಾಂಚಂದ್ರ ಮಾಹಿತಿ ನೀಡಿದ್ದಾರೆ.
2011ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವಿಜಯದ ಪತಾಕೆ ಹಾರಿಸುವ ಮೂಲಕ ವಿಶ್ವಕಪ್ ಗೆದ್ದುಕೊಂಡಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮಾರಾಟವಾಗಿದೆ ಎಂದು ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಆರೋಪಿಸಿದ್ದರು. ಅಲ್ಲದೆ, 1996ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಅರ್ಜುನ್ ರಣತುಂಗಾ ಕೂಡ ಫೈನಲ್ ಪಂದ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಶ್ರೀಲಂಕಾ ಗಂಭೀರವಾಗಿ ಪರಿಣಮಿಸಿದೆ.
2011ರ ಫೈನಲ್ ಪಂದ್ಯದ ಮುಖ್ಯ ಆಯ್ಕೆದಾರ ಮತ್ತು ಮಾಜಿ ನಾಯಕ ಅರವಿಂದ ಡಿ ಸಿಲ್ವಾ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 274 ರನ್ ಗಳಾ ಸಾಧಾರಣ ಮೊತ್ತ ಮಾತ್ರ ಗಳಿಸಿತ್ತು. ಸಚಿನ್ ತೆಂಡುಲ್ಕರ್ ಕೇವಲ ೧೮ ರನ್ ಮಾತ್ರವೇ ಗಳಿಸಿ ನಿರಾಸೆ ಮೂಡಿಸಿದ್ದರು. ಭಾರತದ ಗುರಿಗೆ ಉತ್ತರವಾಗಿ ಶ್ರೀಲಂಕಾ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತಾದರೂ ಅಂತಿಮವಾಗಿ ೬ ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು.