ಬೆಲ್ ಗ್ರೇಡ್, ಜೂ. 23 (DaijiworldNews/SM): ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನೋವಾಕ್ ಜೋಕೊವಿಚ್ ವಿಶ್ವದ ನಂ. 1 ಟೆನಿಸ್ ಆಟಗಾರರಾಗಿದ್ದಾರೆ. ಅವರು ಕೊವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ವರದಿ ಪಾಸಿಟಿವ್ ಬಂದಿದೆ.
ಕೊರೊನಾ ಮಹಾಮಾರಿಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಶ್ವ ಟೆನಿಸ್ ಸಂಸ್ಥೆ ಟೆನಿಸ್ ಪಂದ್ಯಾವಳಿಯನ್ನು ರದ್ದುಗೊಳಿಸಿದೆ. ಆದರೂ ಇದೀಗ ಅನುಭವಿ, ಹಿರಿಯ ಟೆನಿಸ್ ಸ್ಟಾರ್ ಜೊಕೊವಿಚ್ ನಲ್ಲಿ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನು ಇಷ್ಟು ಮಾತ್ರವಲ್ಲದೆ, ಜೊಕೊವಿಕ್ ಪತ್ನಿ ಜೆಲೆನಾಗೂ ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ ವರದಿಯಾಗಿದೆ. ಆದರೆ, ಮಕ್ಕಳ ವರದಿ ನೆಗೆಟಿವ್ ಬಂದಿರುವುದು ಸ್ವಲ್ಪ ನೆಮ್ಮದಿಯನ್ನು ತಂದಿದೆ.