ಲಾಹೋರ್, ಜೂ 20 (DaijiworldNews/PY) : ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ತಂಡವು ಜೂನ್ 28 ರಂದು ಇಂಗ್ಲೆಂಡ್ಗೆ ಪ್ರಯಾಣ ಮಾಡಲಿದ್ದು, ಬಳಿಕ 14 ದಿಗಳ ಕಾಲ ಕ್ವಾರಂಟೈನ್ ಆಗಲಿದೆ. ಆದರೆ, ತಂಡದೊಂದಿಗೆ ಶೋಯೆಬ್ ಮಲಿಕ್ ಇಂಗ್ಲೆಂಡ್ಗೆ ಪ್ರಯಾಣಿಸದೇ, ಬದಲಾಗಿ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಶೋಯೆಬ್ ಮಲಿಕ್ ಅವರು, ಪಾಕಿಸ್ತಾನ ಸೂಪರ್ ಲೀಗ್ ಹಾಗೂ ಲಾಕ್ಡೌನ್ ಕಾರಣದಿಂದ ಕಳೆದ ಐದು ತಿಂಗಳಿನಿಂದ ಪಾಕಿಸ್ತಾನದ ಸೈಲ್ಕೋಟ್ನಲ್ಲಿ ಉಳಿದಿದ್ದರು. ಅಲ್ಲದೇ, ಶೋಯೆಬ್ ಮಲಿಕ್ ಅವರು ಕಳೆದ ಐದು ತಿಂಗಳಿನಿಂದ ಪತ್ನಿ ಹಾಗೂ ಪುತ್ರನನ್ನು ಭೇಟಿ ಮಾಡಿರಲಿಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅನುಮತಿ ಪಡೆದು ಶೋಯೆಬ್ ಮಲಿಕ್ ಅವರು ತನ್ನ ಪತ್ನಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪುತ್ರ ಇಜಾನ್ನನ್ನು ಭೇಟಿ ಮಾಡಲು ಭಾರತಕ್ಕೆ ಆಗಮಿಸುತ್ತಿದ್ದಾರೆ.
ಶೋಯೆಬ್ ಮಲಿಕ್ ಅವರು ಜುಲೈ 24ರಂದು ಭಾರತ ಪ್ರವಾಸ ಮುಗಿಸಿ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಜೊತೆ ಪಾಕಿಸ್ತಾನ
ಕ್ರಿಕೆಟ್ ಮಂಡಳಿ ಮಾತುಕತೆ ನಡೆದಿದ್ದು. ಇಂಗ್ಲೆಂಡ್ ಸರ್ಕಾರದ ಎಲ್ಲಾ ನಿಯಮಗಳನ್ನು ಶೋಯೆಬ್ ಮಲಿಕ್ ಅವರು ಪಾಲಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಪಾಕಿಸ್ತಾನ ತಂಡವು ಜೂನ್ 28ಕ್ಕೆ ಮ್ಯಾಂಚೆಸ್ಟರ್ಗೆ ತೆರಳಲಿದೆ. ಪಾಕಿಸ್ತಾನ ತಂಡವು ಡರ್ಬಿಶೇರ್ನೊಂದಿಗಿನ ಪಂದ್ಯಾಟಕ್ಕೂ ಮುನ್ನ 14 ದಿನ ಕ್ವಾರಂಟೈನ್ ಆಗಲಿದೆ.