ಬೆಂಗಳೂರು, ಜೂ 20 (DaijiworldNews/PY) : ಕಾರ್ಯಕಾರಿ ಸಮಿತಿಯು ಕೆಸ್ಎಲ್ಟಿಎ ಉಪಾಧ್ಯಕ್ಷ ರೋಹನ್ ಬೋಪಣ್ಣ ಅವರನ್ನು ಕೆಸ್ಎಲ್ಟಿಎ ಅಭಿವೃದ್ದಿ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾತನಾಡಿರುವ ಕೆಸ್ಎಲ್ಟಿಎ ಕಾರ್ಯದರ್ಶಿ ಸುನಿಲ್ ಯಜಮಾನ್ ಅವರು, ಅಭಿವೃದ್ದಿ ಸಮಿತಿಯು ರಾಜ್ಯದಿಂದ ಆಟಗಾರರು ಹೇಗೆ ಹೊರಹೊಮ್ಮಬಹುದು ಎನ್ನುವುದನ್ನು ಪರಿಶೀಲನೆ ಮಾಡಿದೆ. ಇದಕ್ಕೆ ಸಮಿತಿಯು ನೀಲನಕ್ಷೆಯನ್ನು ತಯಾರು ಮಾಡಲಿದೆ. ರೋಹನ್ ಬೋಪಣ್ಣ ಅವರು ಸಾಕಷ್ಟು ಪರಿಣತಿ ಹಾಗೂ ಮೌಲ್ಯ ಹೊಂದಿದ್ದಾರೆ, ಕೆಸ್ಎಲ್ಟಿಗೆ ಇದರಿಂದ ಒಳ್ಳೆಯದಾಗುತ್ತದೆ, ಅವರು ಯುವ ಆಟಗಾರರನ್ನು ತಂದು ಅವರಿಂದ ಕೆಲಸ ಮಾಡಿಸುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯ ಹಾಗೂ ಪ್ರಾದೇಶಿಕ ಶಿಬಿರಗಳನ್ನು ಕೆಎಸ್ಎಲ್ಟಿಎ ಸ್ಥಾಪನೆ ಮಾಡಲು ಬಯಸಿದ್ದು ಹಾಗೂ ಭರವಸೆಯ ಆಟಗಾರರಿಗೆ ಆರ್ಥಿಕ ನೆರವನ್ನು ನೀಡಲು ತಯಾರಾಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ಮೂಲಸೌಕರ್ಯದ ದೃಷ್ಟಿಯಿಂದ ಟೆನಿಸ್ ಸಂಕೀರ್ಣವನ್ನು ರಚನೆ ಮಾಡಲು ಬಯಸಲಾಗಿದೆ. ನಾವು ಹೆಚ್ಚಿನ ಸಾರ್ವಜನಿಕ ಕೋರ್ಟ್ ಅನ್ನು ಬಯಸುತ್ತೇವೆ. ನಾವು ಈ ಪ್ರದೇಶದಲ್ಲಿ ಟೆನಿಸ್ ಕ್ರೀಡೆ ಹೆಚ್ಚು ಪ್ರಚಾರವಾಗಲು ಬಯಸುತ್ತೇವೆ. ಪ್ರತಿಭೆಗಳಿಗಾಗಿ ಅವೇಷಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಸಮಿತಿಯು ವಿಷನ್ 2030 ರ ದೀರ್ಘಾವಧಿಯ ಗುರಿಯನ್ನು ಘೋಷಿಸಿದೆ. ತಮ್ಮ ನಾಲ್ಕು ವರ್ಷಗಳ ಅವಧಿಯಲ್ಲಿ ಅಧಿಕಾರಿಗಳು ಕ್ರೀಡೆ ಹಾಗೂ ಆಟಗಾರರ ಅಭಿವೃದ್ದಿಯತ್ತ ಗಮನ ವಹಿಸುತ್ತಾರೆ. ಇದರೊಂದಿಗೆ ಶಾಲಾ ಮಟ್ಟದಲ್ಲಿ ಹೆಚ್ಚಿನ ಮಕ್ಕಳಿಗೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು ಪ್ರೋತ್ಸಾಹ ನೀಡುತ್ತಾರೆ ಎಂದಿದ್ದಾರೆ.