ನವದೆಹಲಿ, ಜೂ. 16 (DaijiworldNews/SM): ಬಾಂಗ್ಲಾದೇಶದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಹಗಲು ರಾತ್ರಿ ಕ್ರಿಕೆಟ್ ಪಂದ್ಯವನ್ನು ಆಡಿತ್ತು. ಹಗಲು ರಾತ್ರಿ ಪಂದ್ಯ ಪಿಂಕ್ ಬಾಲ್ ಪಂದ್ಯ. ಇದೀಗ ಮತ್ತೊಮ್ಮೆ ಭಾರತ ಪಿಂಕ್ ಬಾಲ್ ಪಂದ್ಯವನ್ನು ಆಡಲಿದ್ದು, ಆಸ್ಟ್ರೇಲಿಯಾ ವಿರುದ್ಧ ಅಂಗಣ ರೆಡಿಯಾಗಿದೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪಂದ್ಯ ಅಂದುಕೊಂಡಿರುವಷ್ಟು ಸುಲಭವಿಲ್ಲ. ಆಸಿಸ್ ಪ್ರವಾಸದಲ್ಲಿ ತೆರಳುವ ತಮಗೆ ಒಂದಿಷ್ಟು ಸವಾಲಿನಿಂದ ಕೂಡಿರಲಿದೆ ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೇಳಿದ್ದಾರೆ.
ಟೀಮ್ ಇಂಡಿಯಾ ತನ್ನ ಮೊದಲ ಹಗಲು-ರಾತ್ರಿ ಕ್ರಿಕೆಟ್ ಆಟವನ್ನು ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಆಡಿತ್ತು. ಇದೀಗ ಮತ್ತೆ ಭಾರತ ಪಿಂಕ್ ಬಾಲ್ ಪಂದ್ಯವನ್ನು ಆಸ್ಟ್ರೇಲಿಯಾ ತಂಡದ ವಿರುದ್ದ ಆಡಲಿದೆ. ಈ ಬಗ್ಗೆ ಟೀಮ್ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಹರ್ನಿಶಿ ಪಂದ್ಯ ನಿಜಕ್ಕೂ ದೊಡ್ಡ ಸವಾಲೆನಿಸಲಿದೆ ಎಂದು ರೋಹಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಡಿಸೆಂಬರ್ 3ರಿಂದ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಡಿಸೆಂಬರ್ 11 ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಡೇ-ನೈಟ್ ಪಂದ್ಯವನ್ನಾಗಿ ಆಡಿಸಲು ತೀರ್ಮಾನಿಸಲಾಗಿದೆ.