ನವದೆಹಲಿ, ಜೂ 12 (DaijiworldNews/SM): ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ಗುರಿಯಾಗಿದ್ದ ವೇಟ್ಲಿಫ್ಟರ್ ಸಂಜಿತಾ ಚಾನು ಇದೀಗ ತಮ್ಮ ಮೆಲಿದ್ದ ಆರೋಪದಿಂದ ಹೊರಬಂದಿದ್ದಾರೆ. ಆರೋಪ ಮುಕ್ತರಾಗುವ ಮೂಲಕ ಸಂಗೀತಾ ಚಾನು ಮತ್ತೆ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಖುಷಿಯ ವಿಚಾರವೆನೆಂದರೆ, ಭಾರತದ ವೇಟ್ಲಿಫ್ಟರ್ ಸಂಜಿತಾ ಚಾನು ಎದುರಿಸುತ್ತಿದ್ದ ಉದ್ದೀಪನ ಮದ್ದು ಸೇವನೆ ಆರೋಪ ಪ್ರಕರಣವನ್ನು ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಷನ್ ಕೈಬಿಟ್ಟಿದೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ ಶಿಫಾರಸಿನ ಆಧಾರದ ಮೇಲೆ ಐಡಬ್ಲ್ಯುಎಫ್ ಈ ನಿರ್ಧಾರಕ್ಕೆ ಬಂದಿದೆ.
ಚಾನು ಅವರಿಂದ ಸಂಗ್ರಹಿಸಿದ್ದ ಪರೀಕ್ಷಾ ಮಾದರಿಯಲ್ಲಿ ಉದ್ದೀಪನ ಮದ್ದು ಸೇವಿಸಿರುವ ಅಂಶವಿರುವುದು ಪತ್ತೆಯಾಗಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಆರೋಪ ಮುಕ್ತರಾಗಿರುವುದು ಸಂತಸ ತಂದಿದೆ. ಆದರೆ, ಇಷ್ಟು ಸಮಯ ಕಳೆದುಕೊಂಡ ಅವಕಾಶಗಳ ಗತಿ ಏನು ಎಂದು ಪ್ರಸ್ನಿಸಿದ್ದಾರೆ. ಅಲ್ಲದೆ, ತಾವು ಅನುಭವಿಸಿರುವ ನೋವಿಗೆ ಕ್ಷಮೆ ಹಾಗೂ ಪರಿಹಾರವನ್ನು ಕೇಳಿದ್ದಾರೆ. ಇನ್ನು ಸಂಜಿತಾ 2014 ಮತ್ತು 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.