ನವದೆಹಲಿ, ಜೂ 09 (DaijiworldNews/SM): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಸೈ ಎನಿಸಿದ್ದಾರೆ. ಅಭಿಮಾನಿಗಳ ನಿರೀಕ್ಷೆಯಂತೆ ಕೊಹ್ಲಿ ಪ್ರದರ್ಶನ ನೀಡುತ್ತಾರೆ. ಕೆಲವೊಂದ ಸಂದರ್ಭಗಳಲ್ಲಿ ವಿರಾಟ ಸ್ವರೂಪವನ್ನೂ ಕೂಡ ತೋರಿರುವ ಸನ್ನಿವೇಶಗಳಿವೆ. ಈ ನಡುವೆ ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಕೊಹ್ಲಿ ಅಪಾರ ಗೌರವ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ಗೂ ತನ್ನದೇ ಆದ ಆದ್ಯತೆ ನೀಡುತ್ತಿದ್ದಾರೆ. ಈ ವಿಚಾರ ಭಾರತ ತಂಡಕ್ಕೆ ಹೆಮ್ಮೆಯ ಸಂಗತಿಯೆಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಚುಟುಕು ಕ್ರಿಕೆಟ್, ಏಕದಿನ ಸರಣಿಗೆ ಯಾವ ಆದ್ಯತೆ ನೀಡುತ್ತಾರೆ? ಅದೇ ಆದ್ಯತೆ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೂ ನೀಡುತ್ತಾರೆ. ಸಾಂಪ್ರಾದಾಯಿಕ ಸ್ವರೂಪದ ಪಂದ್ಯದಲ್ಲಿ ಭಾರತ ತಂಡ ಮತ್ತಷ್ಟು ಅದ್ಬುತವಾದ ಪ್ರದರ್ಶನ ತೋರಬೇಕಾಗಿದೆ ಎಂದು ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ.
ಟಿ-20 ಮಾದರಿಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಅಲ್ಲಿನ ಒಂದೊಂದು ಎಸತವೂ ಅಮೂಲ್ಯವಾಗಿದೆ ಎಂದಿದ್ದಾರೆ. ಇನ್ನು ಎಲ್ಲಾ ಮಾದರಿಯ ಪಂದ್ಯಗಳಲ್ಲಿ ವಿಭಿನ್ನವಾದ ಕೌಶಲ್ಯದ ಅಗತ್ಯವಿರುತ್ತದೆ. ಟಿ-20 ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ನಡುವಿನ ವ್ಯತ್ಯಾಸವೆಂದರೆ ಟಿ- 20 ಮಾದರಿಯಲ್ಲಿ ಇನ್ನೂ ಹೆಚ್ಚಿನದನ್ನು ಪಡೆಯಬಹುದು. ಟೆಸ್ಟ್ ಕ್ರಿಕೆಟ್ ನಲ್ಲಿ ದೌರ್ಬಲ್ಯ ಹೊಂದಿದ್ದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.