ನವದೆಹಲಿ, ಜೂ. 08 (DaijiworldNews/SM): ಏಕದಿನ ಕ್ರಿಕೆಟ್ ನಲ್ಲಿ ಹಿಟ್ ಮ್ಯಾನ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಹಾಗೂ ಇತಿಹಾಸದಲ್ಲೇ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆ ಹೊಂದಿರುವ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅವರಿಗೆ ಹೊಸ ಸವಾಲೊಂದು ಎದುರಾಗಿದೆ. ರೋಹಿತ್ ಶರ್ಮಾಗೆ ಮೈಕಲ್ ಹೋಲ್ಡಿಂಗ್ ಸವಾಲು ಹಾಕಿದ್ದಾರೆ.
ಮೈದಾನದ ಮೂಲೆಮೂಲೆಗೂ ಚೆಂಡನ್ನು ರೋಹಿತ್ ಶರ್ಮಾ ಅಟ್ಟುತ್ತಾರೆ. ಆದರೆ, ಅವರಿಗೆ ಸವಾಲು ಹಾಕಿರುವ ಮೈಕಲ್ ಹೋಲ್ಡಿಂಗ್, ಅತ್ಯುತ್ತಮ ಗುಣಮಟ್ಟದ ವೇಗದ ಬೌಲಿಂಗ್ ಎದುರು ಸ್ವಾಭಾವಿಕ ಹೊಡೆತಗಳನ್ನು ಸಿಡಿಸಲು ಸಾಧ್ಯವಾಗುವುದಿಲ್ಲ. ಆಕ್ರಮಣಕಾರಿ ವೇಗದ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಯಾವ ರೀತಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಸವಾಲೆಸಿದಿದ್ದಾರೆ.
ರೋಹಿತ್ ಬಗ್ಗೆ ಮೈಕಲ್ ಹೋಲ್ಡಿಂಗ್ ಅಭಿಮಾನ ಹೊಂದಿದ್ದು, ಈ ನಡುವೆಯೇ ಅವರಿಗೆ ಇದೊಂದು ಸವಾಲು ನೀಡಿದ್ದಾರೆ. ಇನ್ ಸ್ಟಾಗ್ರಾಮ್ ಲೈವ್ ಚಾಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಈ ಸವಾಲನ್ನು ಸ್ವೀಕರಿಸಿ ರೋಹಿತ್ ಪ್ರದರ್ಶನ ನೀಡಲಿದ್ದಾರಾ ಅನ್ನುವುದು ಅಭಿಮಾನಿಗಳಲ್ಲಿರುವ ಕುತೂಹಲವಾಗಿದೆ.