ನವದೆಹಲಿ, ಜೂ. 07 (DaijiworldNews/SM): ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ವಿರುದ್ಧ ಬಳಕೆ ಮಾಡಿರುವ ಪದದಿಂದಾಗಿ ಯುವರಾಜ್ ಸಿಂಗ್ ಅವರು ವಿವಾದದ ಸುಳಿಗೆ ಸಿಲುಕಿದ್ದರು. ಆದರೆ, ಇದೀಗ ಅವರು, ವಿಷಾದ ವ್ಯಕ್ತಪಡಿಸಿದ್ದಾರೆ.
ನಾನು ಉದ್ದೇಶಪೂರ್ವಕವಾಗಿ ಯಾರುಗೂ ನೋವುಂಟು ಮಾಡಿಲ್ಲ. ಒಂದೊಮ್ಮೆ, ಜನರ ಭಾವನೆಗಳಿಗೆ ನೋವುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಭಾರತದಸ್ಪೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಜೊತೆಗೆ ಇನ್ಸ್ಟಾಗ್ರಾಮ್ ಲೈವ್ ಚಾಟ್ನಲ್ಲಿದ್ದ ಸಂದರ್ಭದಲ್ಲಿ ಯುವರಾಜ್, ತಮ್ಮ ಸಂಭಾಷಣೆ ವೇಳೆ ಆನ್ಲೈನ್ ನಲ್ಲಿ ಇದ್ದಂತದ ಚಹಲ್ ಮತ್ತು ಕುಲ್ದೀಪ್ ಅವರನ್ನು 'ಭಂಗಿ' ಎಂದಿದ್ದರು. ಇದುವೆ ಅವರ ಮೇಲೆ ವಿವಾದ ಬಂದು ಎರಗಲು ಕಾರಣವಾಗಿತ್ತು.
ಈ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಟ್ವೀಟರ್ ನಲ್ಲಿ ಯುವರಾಜ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.