ನವದೆಹಲಿ, ಜೂ 03 (DaijiworldNews/SM): ಭಾರತೀಯ ಕ್ರಿಕೆಟ್ ಕಂಡ ಅಪ್ರತಿಮ ಆಟಗಾರ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಕಂಬ್ಯಾಕ್ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಕ್ರಿಕೆಟ್ ಪಂದ್ಯ ಆರಂಭವಾದಲ್ಲಿ ಧೋನಿಯವರ ಸಾಮಾರ್ಥ್ಯ ಏನು ಎಂಬುವುದು ತಿಳಿಯಲಿದೆ ಎಂದು ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಹೇಳಿದ್ದಾರೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಈಗಾಗಲೇ ಮುಂದೂಡಲಾಗಿದೆ. ಆದರೆ, ಇದಕ್ಕೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯಗಳಲ್ಲಿ ಧೋನಿಯವರು ಹೊಸ ಹುರುಪಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಪಂದ್ಯಗಳು ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಧೋನಿಯವರ ಪ್ರದರ್ಶನ ಕಾಣಸಿಕ್ಕಿಲ್ಲ.
ಕಳೆದ ವರ್ಷ ಜುಲೈನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಸೋತ ಬಳಿಕ ಧೋನಿ ತೆರೆಮರೆ ಸರಿದಿದ್ದಾರೆ. ಆದರೆ, ಐಪಿಎಲ್ ಸರಣಿಯಲ್ಲಿ ಧೋನಿ ಕಂ ಬ್ಯಾಕ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಟೂರ್ನಿಯೇ ಮುಂದೂಡಲ್ಪಟ್ಟಿದೆ. ಆದರೆ, ಕೊರೊನಾ ಮುಗಿದು ಪರಿಸ್ಥಿತಿ ಸರಿಯಾಗಿ ಟೂರ್ನಿ ಆರಂಭವಾದ ಬಳಿಕ ಮಹೇಂದ್ರ ಸಿಂಗ್ ಧೋನಿ ತನ್ನ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ ಎಂದು ಹಿರಿಯ ಆಟಗಾರ ಸುರೇಶ್ ರೈನಾ ಧೋನಿ ಪರ ಬ್ಯಾಟ್ ಬೀಸಿದ್ದಾರೆ.