ನವದೆಹಲಿ, ಮೇ 28 (DaijiworldNews/SM): ಕೋವಿಡ್ ಮಹಾಮಾರಿಯಿಂದಾಗಿ ಕ್ರಿಕೆಟ್ ಸರಣಿ ಸದ್ಯ ನಡೆಯುತ್ತಿಲ್ಲ. ಇದೀಗ ಮತ್ತೆ ಆರಂಭಗೊಂಡ ಸಂದರ್ಭದಲ್ಲಿ ಸ್ಥಳೀಯ ಅಂಪೈರ್ ಗಳನ್ನು ಬಳಾಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮರ್ಶೆಗೆ ಸೂಚಿಸಲಾಗಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬೌಲರ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಚೆಂಡಿಗೆ ಉಗುಳು ಬಳಸಬಾರದೆಂದು ಈಗಾಗಲೇ ಕುಬ್ಳೆ ಪ್ರಸ್ತಾಪಿಸಿದ್ದಾರೆ. ಇದರ ಜತೆಗೆ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚುವರಿ ಪರಿಶೀಲನೆಗಾಗಿ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಸೂಚಿಸಿದೆ.
ಇದೀಗ ಐಸಿಸಿ ಕ್ರಿಕೆಟ್ ಸಮಿತಿಯ ಶಿಫಾರಸುಗಳನ್ನು ಅವಲೋಕಿಸಿ ನಂತರ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪ್ರಯಾಣದ ನಿರ್ಬಂಧ ಇರುವುದರಿಂದ ಸ್ಥಳೀಯ ಅಂಪೈರ್ಗಳನ್ನು ಬಳಸುವ ಸಲಹೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕ್ರಿಕೆಟ್ ಅನ್ನು ಪ್ರಾರಂಭಿಸುವುದು ಸಮಯದ ಅವಶ್ಯಕತೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರಯಾಣದ ನಿರ್ಬಂಧ, ಕ್ವಾರಂಟೇನ್ ಮೂಲಕ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾವು ಭಾವಿಸಿದ್ದೇವೆ. ಇನ್ನು ಮಂಡಳಿಯಲ್ಲಿ ಸಾಕಷ್ಟು ಅನುಭವಿ ಅಂಪೈರ್ಗಳು ಇಲ್ಲ. ಆದ್ದರಿಂದ, ಕ್ರಿಕೆಟ್ಗೆ ಕಿಕ್ಸ್ಟಾರ್ಟ್ ಮಾಡಲು, ಸ್ಥಳೀಯ ಅಂಪೈರ್ಗಳನ್ನು ಬಳಸುವುದು ಉತ್ತಮ ಎಂದು ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಕನೆಕ್ಟೆಡ್ನಲ್ಲಿ ಕುಂಬ್ಳೆ ಹೇಳಿದ್ದಾರೆ.