ನವದೆಹಲಿ, ಮೇ 25 (Daijiworld News/MSP): ಭಾರತದ ಹಾಕಿ ತಂಡದ ಸದಸ್ಯರಾಗಿದ್ದ ಹಾಗೂ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ಬಾಚಿಸಿದ್ದ ಹಾಕಿ ದಂತ ಕತೆ ಎಂದೇ ಖ್ಯಾತರಾದ ಬಲ್ಬೀರ್ ಸಿಂಗ್ ಸೀನಿಯರ್ (96) ಅವರು ಸೋಮವಾರ ವಿಧಿವಶರಾಗಿದ್ದಾರೆ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಲ್ಬೀರ್ ಸಿಂಗ್ ಅವರು ಪಂಜಾಬ್ ರಾಜ್ಯದ ಮೊಹಾಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಬಲ್ಬೀರ್ ಸಿಂಗ್ ಅವರನ್ನು 196 ಕ್ರೀಡಾ ದಂತಕತೆಗಳಲ್ಲಿ ಇವರನ್ನುಆಯ್ಕೆ ಮಾಡಿತ್ತು. ಈ ಗೌರವ ಪಡೆದ ಏಕಮಾತ್ರ ಭಾರತೀಯ ಎಂಬ ಹೆಗ್ಗಳಿಕೆ ಕೂಡ ಅವರದ್ದಾಗಿದೆ.