ಮುಂಬೈ, ಮೇ 24 (DaijiworldNews/SM): ಮಹೇಂದ್ರ ಸಿಂಗ್ ಧೋನಿ ಬಳಿಕ ಟೀಂ ಇಂಡಿಯಾದ ಯಶಸ್ವಿ ನಾಯಕನಾಗಿರುವುದು ವಿರಾಟ್ ಕೊಹ್ಲಿ. ಕಳೆದ ಕೆಲವು ವರ್ಶಗಳಿಂದ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗುತ್ತಿದ್ದಾರೆ. ಈ ನಡುವೆ ಟಿ-20 ನಾಯಕ ಸ್ಥಾನವನ್ನು ರೋಹಿತ್ ಶರ್ಮಾಗೆ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಇದಕ್ಕೆ ಮಾಜಿ ಆಟಗಾರ ಅತುಲ್ ವಸನ್ ಧ್ವನಿಗೂಡಿಸಿದ್ದು, ರೋಹಿತ್ ಗೆ ಟಿ20 ನಾಯಕತ್ವ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕತ್ವದ ಬಗ್ಗೆ ಆರಂಭದಿಂದಲೂ ಚರ್ಚೆಗಳು ನಡೆಯುತ್ತಿವೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಒಬ್ಬರೇ ನಾಯಕರು ಬೇಡ, ನಾಯಕತ್ವವನ್ನು ಬದಲಾಯಿಸಿ ಎಂಬ ಆಗ್ರಹಗಳು ಕೇಳಿ ಬರುತ್ತಿತ್ತು. ಇದೀಗ ಮಾಜಿ ವೇಗಿ ಅತುಲ್ ವಸನ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಟಿ-20 ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ನೀಡುವಂತೆ ಸೂಚಿಸಿದ್ದಾರೆ.
ಟಿ-20 ಕ್ರಿಕೆಟ್ ನಲ್ಲಿ ಮುಂಬೈಯ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುವ ಸಾಮಾರ್ಥ್ಯ ಹೊಂದಿದ್ದಾರೆ. ಅದಕ್ಕೆ ತಕ್ಕಂತೆ ಪ್ರದರ್ಶನವನ್ನು ಕೂಡ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿತ್ ಸಮರ್ಥರೆಂದು ಅವರು ತಿಳಿಸಿದ್ದಾರೆ.ಈಗಾಗಲೇ ಕೊಹ್ಲಿ ಗಾಯಗೊಂಡಿದ್ದ ಸಂದರ್ಭದಲ್ಲಿ ರೋಹಿತ್ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದರು. ಐಪಿಎಲ್ ನಲ್ಲೂ ರೋಹಿತ್ ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಾಮಾರ್ಥ್ಯವಿದೆ ಎಂಬುವುದು ಅತುಲ್ ವಸನ್ ಅವರ ಅಭಿಪ್ರಾಯ.