ನವದೆಹಲಿ, ಮೇ 07 (DaijiworldNews/SM): ಕೊರೊನಾ ಎಫೆಕ್ಟ್ ನಿಂದಾಗಿ ವಿಶ್ವದೆಲ್ಲೆಡೆ ಬಹುತೇಕ ಕ್ರೀಡಾಕೂಟಗಳು ರದ್ದಾಗಿವೆ. ಈ ಸೀಝನ್ ನಲ್ಲಿ ನಡೆಯಬೇಕಿದ್ದ ಐಪಿಎಲ್ ಸರಣಿ ಕೂಡ ಸದ್ಯ ಮುಂದೂಡಲ್ಪಟ್ಟಿದೆ. ಇದರಿಂದ ಕ್ರಿಕೆಟಿಗರು ಕೂಡ ಸರಣಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.
ಕೊರೊನಾ ವೈರಸ್ನಿಂದಾಗಿ ದೇಶದೆಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದ್ದು, ಮೇ 17 ರ ತನಕ ಮುಂದುವರೆಯಲಿದೆ. ಈ ಸಮಯದಲ್ಲಿ, ದೇಶಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಐಪಿಎಲ್ನ 13 ನೇ ಆವೃತ್ತಿ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಐಪಿಎಲ್ ಮತ್ತು ಟೂರ್ನಿಯ ಸಂಭ್ರಮವನ್ನು ತಪ್ಪಿಸಿಕೊಂಡಿದ್ದೇವೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ ಕಳೆದ ಹಲವು ಆವೃತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರಶಸ್ತಿ ಗೆಲುವಿನ ಆಕಾಂಕ್ಷಿಯಾಗಿದ್ದರೂ ಕೂಡ ಅದೃಷ್ಟ ತಂಡದ ಕೈ ಹಿಡಿಯುತ್ತಿಲ್ಲ.
ಐಪಿಎಲ್ ಸರಣಿ ಮುಂದೂಡಲ್ಟಟ್ಟಿರುವುದರಿಂದ ಕೊಟ್ಯಾಂತರ ಅಭಿಮಾನಿಗಳಿಗೂ ಕೂಡ ನಿರಾಸೆಯಾಗಿದೆ. ಈ ಲಾಕ್ ಡೌನ್ ಸಂದರ್ಭ ಮನೆಯಲ್ಲೇ ಇದ್ದವರಿಗೆ ಐಪಿಎಲ್ ಮತ್ತಷ್ಟು ಮನೋರಂಜನೆ ನೀಡುತ್ತಿತ್ತು. ಆದರೆ, ಅದು ಸಾಧ್ಯವಾಗಿಲ್ಲ.