ದುಬೈ, ಮೇ 01 (DaijiworldNews/SM): ಐಸಿಸಿಯಿಂದ ನೂತನ ರ್ಯಾಂಕಿಂಗ್ ಬಿಡುಗಡೆಗೊಂಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಿಂದ ಕುಸಿದಿದೆ.
ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೆಸ್ಟ್ ಮತ್ತು ಟಿ-20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಅಲಂಕರಿಸಿದೆ. ಟೆಸ್ಟ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಆ ಮೂಲಕ 2016ರ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಅಗ್ರಸ್ಥಾನವನ್ನು ಬಿಟ್ಟುಕೊಟ್ಟಂತಾಗಿದೆ.ಇನ್ನು ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ (115) ಎರಡನೇ ಸ್ಥಾನದಲ್ಲಿದೆ. ಭಾರತ ಈಗ 114 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಜನವರಿ 2016ರಲ್ಲಿ ಭಾರತ ಅಗ್ರಸ್ಥಾನ ಹೊಂದಿದ್ದಾಗಲೂ ಕೇವಲ ಒಂದೇ ಅಂಕಗಳ ಅಂತರದಲ್ಲಿ ಆಸ್ಟ್ರೇಲಿಯಾ ಎರಡನೇ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದವು.
ಐಸಿಸಿ ಏಕದಿನ ತಂಡದ ಶ್ರೇಯಾಂಕದಲ್ಲಿ, ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ 127 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ. ಭಾರತ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ.
2011 ರಲ್ಲಿ ಟಿ 20 ಐ ಶ್ರೇಯಾಂಕವನ್ನು ಪರಿಚಯಿಸಿದ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಅಗ್ರಸ್ಥಾನಲ್ಲೇರಿದ್ದು 268 ಪಾಯಿಂಟ್ಗಳೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದ್ದು, ಭಾರತ ಕೇವಲ ಎರಡು ಪಾಯಿಂಟ್ಗಳ ಹಿಂದಿದ್ದು ಮೂರನೇ ಸ್ಥಾನದಲ್ಲಿದೆ.