ನವದೆಹಲಿ, ಏ 28 (DaijiworldNews/SM): ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹಾಲಿ ಕೀಪರ್ ಕೆ.ಎಲ್. ರಾಹುಲ್ ಹಿರಿಮೆಯನ್ನು ವ್ಯಕ್ತಪಡಿಸಿದ್ದಾರೆ. ಮಹೇಂದ್ರ ಸಿಂಗ್ ಅವರ ಸ್ಥಾನ ತುಂಬುವುದು ನಿಜಕ್ಕೂ ಒತ್ತಡದ ಕೆಲಸವಾಗಿದೆ ಎಂದಿದ್ದಾರೆ.
ವಿಕೆಟ್ ಕೀಪಿಂಗ್ ಮಾಡುವಾಗ ನಾನು ಒತ್ತಡಕ್ಕೆ ಒಳಗಾದಂತೆ ಕಂಡು ಬಂದಿತು. ಇದಕ್ಕೆ ಕಾರಣ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಹೌದು ಅವರ ಸ್ಥಾನ ತುಂಬವುದು ನಿಜಕ್ಕೂ ಒತ್ತಡದ ಕೆಲಸ ಎಂದು ಕನ್ನಡಿಗ ಕೆ.ಎಲ್ ರಾಹುಲ್ ತಿಳಿಸಿದ್ದಾರೆ.
ಕ್ರಿಕೆಟ್ ನಿಂದ ಮಹಿ ಸ್ವಲ್ಪ ಸ್ವಲ್ಪವೇ ದೂರವಾಗುತ್ತಿದ್ದಾರೆ. ಅವರ ಸ್ಥಾನದಲ್ಲಿ ಕಳೆದ ಒಂದು ವರ್ಷದಿಂದ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರೊಂದಿಗೆ ಉತ್ತಮ ದಾಂಡಿಗರಾಗಿಯೂ ರಾಹುಲ್ ರೂಪುಗೊಂಡಿದ್ದಾರೆ. ಆ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.