ಮುಂಬೈ, ಏ 24 (DaijiworldNews/SM): ದೇಶದಲ್ಲಿ ಕೊರೋನಾ ಮಹಾಮಾರಿ ಆತಂಕವನ್ನು ಸೃಷ್ಠಿಸಿರುವ ಸಂದರ್ಭದಲ್ಲಿ ಕ್ರೀಡಾಲೋಕ ಸ್ತಬ್ಧಗೊಂಡಿದೆ. ಈ ನಡುವೆ ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ತನ್ನ ಹುಟ್ಟು ಹಬ್ಬವನ್ನು ಆಚರಿಸದೆ ದೇಶಕ್ಕೆ ಮಾದರಿಯ ಹೆಜ್ಜೆಯನ್ನಿರಿಸಿದ್ದಾರೆ.
ಭಾರತದ ಕ್ರಿಕೆಟ್ ದಂತಕತೆ ಸಚಿವ್ ತೆಂಡೂಲ್ಕರ್ ಅವರು 47 ವಸಂತಗಳನ್ನು ಪೂರೈಸಿದ್ದಾರೆ. 47ನೇ ಹುಟ್ಟುಹಬ್ಬದ ಸಂಭ್ರಮವಿದ್ದರೂ ಕೂಡ ದೇಶದ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಾನು ಯಾವುದೇ ಕಾರಣಕ್ಕೂ ಶೋಕಿ ನಡೆಸಲಾರೆ ಎಂಬುವುದಾಗಿ ನಿರ್ಧರಿಸಿ ತನ್ನ ಹುಟ್ಟು ಹಬ್ಬವನ್ನು ಅವರು ಆಚರಿಸಿಲ್ಲ.
ಆದರೆ, ಏಪ್ರಿಲ್ 24 ರಂದು ಸಚಿನ್ ಅವರು 47ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ತನ್ನ ಹುಟ್ಟು ಹಬ್ಬವನ್ನು ಕೊರೊನಾ ವಿರುದ್ಧ ಹೊರಾಡುವವರಿಗಾಗಿ ಅರ್ಪಿಸಿದ್ದು, ಇದರಿಂದಾಗಿ ಸಂಭ್ರಮವನ್ನು ನಡೆಸಿಲ್ಲ.
ಇದು ಹುಟ್ಟುಹಬ್ಬ ಆಚರಿಸಿಕೊಳ್ಳಲು ಸೂಕ್ತ ಸಮಯವಲ್ಲ. ಹುಟ್ಟುಹಬ್ಬ ಆಚರಿಸದೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ ಗಳು, ಅರೆ ವೈದ್ಯರು, ಪೊಲೀಸರು, ರಕ್ಷಣಾ ಸಿಬ್ಬಂದಿಗೆ ಗೌವರ ಸೂಚಿಸುವುದು ಅರ್ಥಪೂರ್ಣವಾಗಿದೆ ಎಂಬ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.