ಬೆಂಗಳೂರು, ಏ 20 (DaijiworldNews/SM): ಮಂಗಳೂರು ಮೂಲದ ಟೀಂ ಇಂಡಿಯಾದ ಆಟಗಾರ ಬ್ಯಾಟ್ಸ್ ಮನ್ ಕಮ್ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ದೇಶದ ಜನತೆಗೆ ತನ್ನ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ. 28ನೇ ವರ್ಷದ ಬರ್ತ್ ಡೇ ಸಂದರ್ಭದಲ್ಲಿ ಬಡ ಮಕ್ಕಳಿಗೆ ನೆರವು ನೀಡಲು ಕೆ.ಎಲ್. ರಾಹುಲ್ ಮುಂದಾಗಿದ್ದಾರೆ.
ಲಂಡನ್ನಲ್ಲಿ ಕಳೆದ ವರ್ಷ ನಡೆದಿದ್ದ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಬಳಸಿದ್ದ ಬ್ಯಾಟನ್ನು ಕೆಎಲ್ ರಾಹುಲ್ ಹರಾಜಿಗಿಟ್ಟಿದ್ದಾರೆ. ಬಡ ಮಕ್ಕಳಿಗೆ ನೆರವು ನೀಡುವ ಉತ್ತಮ ಉದ್ದೇಶದಿಂದ ರಾಹುಲ್, ವಿಶ್ವಕಪ್ ಬ್ಯಾಟ್ ಹರಾಜಿಗಿಟ್ಟು ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಮಂಗಳೂರು ಮೂಲದ ಕ್ರಿಕೆಟಿಗ ತೋರಿಸಿರುವ ಮಾನವೀಯ ಕಾರ್ಯಕ್ಕೆ ದೇಶವೇ ಶಿರ ಬಾಗಿದ್ದು, ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಏಪ್ರಿಲ್ 18ರ ಶನಿವಾರದಂದು ಕೆ.ಎಲ್. ರಾಹುಲ್ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೆಎಲ್ ರಾಹುಲ್, ಇದೇ ದಿನ ಬಡತನದಲ್ಲಿರುವ ಮಕ್ಕಳಿಗೆ ನೆರವಾಗುವ ಸಂಸ್ಥೆಗೆ ತಾನು ಸಹಾಯ ಮಾಡಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದರು. ಆ ಮೂಲಕ ಮಾನವೀಯ ಕಾರ್ಯವೊಂದಕ್ಕೆ ಕೆ.ಎಲ್. ರಾಹುಲ್ ಮುಂದಾಗಿದ್ದಾರೆ. ರಾಹುಲ್ ಅವರ ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸು ಅವದಾಗಲಿ ಎಂಬುವುದು ದೇಶದಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಹಾಗೂ ಜನಸಾಮಾನ್ಯರ ಹಾರೈಕೆಯಾಗಿದೆ.