ದೆಹಲಿ, ಏ 10 (DaijiworldNews/SM): ಕೊರೊನಾ ತೀವ್ರತೆಯಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್ ಆಗಿದೆ. ಆದಾಗಿಯೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇದೀಗ ದೇಶದಲ್ಲಿನ ಪರಿಸ್ಥಿತಿ ಸುದಾರಿಸಲು ಹಾಗೂ ಸೋಂಕು ನಿಯಂತ್ರಿಸಲು ಜನತೆ ಹೋರಾಡುತ್ತಿದ್ದಾರೆ. ಇದರೊಂದಿಗೆ ಇದೀಗ ವಿವಿಧ ದಾನಿಗಳು ದೇಶದ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ.
ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದು, ಈಗಾಗಲೇ 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಇದರೊಂದಿಗೆ ಇದೀಗ ಹಸಿವಿನಿಂದ ಇರುವವರ ಹಸಿವು ನೀಗಿಸಲು ಸಚಿನ್ ಮುಂದಡಿಯಿಟ್ಟಿದ್ದಾರೆ.
ದೇಶದಲ್ಲಿ 21 ದಿನ ಲಾಕ್ ಡೌನ್ ಘೋಷಿಸಿರುವುದರಿಂದ ದೇಶದಲ್ಲಿ ಹಸಿವಿನ ಹೊಟ್ಟೆಗಳು ಜಾಸ್ತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ತಿಂಗಳಲ್ಲಿ 5000 ಮಂದಿಗೆ ಹಸಿವು ನೀಗಿಸಲು ಮುಂದಾಗಿದ್ದಾರೆ. ನಿರ್ಗತಿಕರಿಗೆ ಹಸಿವು ನೀಗಿಸಲು ಸಚಿವ ಮುಂದಾಗಿದ್ದು, ಅವರ ಮಾನವೀಯ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ.