ನವದೆಹಲಿ, ಏ 09 (DaijiworldNews/SM): ರಾಬಿನ್ ಉತ್ತಪ್ಪ ಐಪಿಎಲ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಲ್ಲಿ ರಾಬಿನ್ ಉತ್ತಪ್ಪ ಕೂಡ ಒಬ್ಬರಾಗಿದ್ದಾರೆ. ಐಪಿಎಲ್ ಹಾಗೂ ದೇಸಿ ಮಾದರಿಯ ಕ್ರಿಕೆಟ್ ನಲ್ಲಿ ಮಾತ್ರ ಪ್ರದರ್ಶನ ನೀಡುತ್ತಿರುವ ಉತ್ತಪ್ಪ ಇದೀಗ ಮತ್ತೊಂದು ವಿಶ್ವಕಪ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದ ವಿರುದ್ಧ 2015ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕೊನೆಯ ಟಿ-20 ಪಂದ್ಯವನ್ನಾಡಿದ್ದ ಅವರು, ಇನ್ನೊಂದು ವಿಶ್ವಕಪ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
36 ವರ್ಷದ ಉತ್ತಪ್ಪ ಭಾರತದ ಪರ 46 ಏಕದಿನ ಪಂದ್ಯ ಹಾಗೂ 13 ಟಿ-20 ಪಂದ್ಯಗಳನ್ನು ಆಡಿದ್ದಾರೆ. ರಾಬಿನ್ ಅವರು 2007ರ ಏಕದಿನ ವಿಶ್ವಕಪ್ ಹಾಗೂ ಅದೇ ವರ್ಷ ನಡೆದಿದ್ದ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅದರ ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವಕಾಶ ವಾಂಚಿತರಾಗಿದ್ದರು. ಆದರೆ, ಇದೀಗ ಮತ್ತೊಮ್ಮೆ ಚುಟುಕು ಕ್ರಿಕೆಟ್ ನ ವಿಶ್ವಕಪ್ ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದು, ಆಯ್ಕೆ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.