ನವದೆಹಲಿ, ಏ 02 (DaijiworldNews/SM): ವಿಶ್ವಕಪ್ ಎರಡನೇ ಬಾರಿ ಗೆದ್ದ ದಿನವನ್ನು ದೇಶ ಗುರುವಾರ ನೆನಪಿಸಿಕೊಂಡಿದೆ. ಅಂದು ವಿಶ್ವಕಪ್ ಗೆದ್ದಿರುವ ಕ್ರೆಡಿಟ್ ಬಹುತೇಕವಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ಸಲ್ಲುತ್ತದೆ.
2011ರ ವಿಶ್ವಕಪ್ ಗೆಲ್ಲಲು ಮಹೇಂದ್ರ ಸಿಂಗ್ ಧೋನಿಯ ಒಂದು ಸಿಕ್ಸ್ ಕಾರಣ ಎಂದು ಹೇಳುವವರಿಗೆ ಮಾಜಿ ಆಟಗಾರ ಗೌತಮ್ ಗಂಭೀರ್ ತರಾಟೆಗೆ ತೆಗೆದುಕೊಂಡಿದ್ದಾರೆ. 9 ವರ್ಷಗಳ ಹಿಂದೆ ಭಾರತ ವಿಶ್ವಕಪ್ ಗೆಲ್ಲಲು ಧೋನಿ ಭಾರಿಸಿರುವ ಒಂದು ಸಿಕ್ಸ್ ಕಾರಣವಲ್ಲ, ಬದಲು ಇಡೀ ತಂಡವೇ ಕಾರಣ ಎಂಬುವುದಾಗಿ ಕಿಡಿ ಖಾರಿದಾರೆ.
2011, ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಟೀಂ ಇಂಡಿಯಾ ಮಣಿಸಿತ್ತು. ಆ ಮೂಲಕ ವಿಶ್ವ ಕಿರೀಟ ಮುಡುಗೇರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ರೋಚಕ ಘಟ್ಟಕ್ಕೆ ತಲುಪಿದ್ದ ಪಂದ್ಯದಲ್ಲಿ ಧೋನಿ ಸಿಕ್ಸರ್ ಸಿಡಿಸಿ ದಡ ಸೇರಿಸಿದ್ದರು. ಈ ಬಗ್ಗೆ ಅಭಿಮಾಣಿಗಳು ಸಾಕಷ್ಟು ಸಂಭ್ರಮಿಸಿದ್ದರು. ಆದರೆ, ಇದೀಗ ಅವರೆಲ್ಲರನ್ನು ಸಂಸದ ಗೌತಮ್ ಗಂಭೀರ್ ತರಾಟೆಗೆತ್ತಿಕೊಂಡಿದ್ದಾರೆ.