ಮುಂಬೈ, ಮಾ 30 (DaijiworldNews/SM): ಗ್ರಾಮೀಣ ಪ್ರದೇಶಗಳ ಕೂಡು ಕುಟುಂಬಗಳಲ್ಲಿ ಹಾಗೂ ಹಳೆಯ ಶೈಲಿಯ ಮನೆಗಳಲ್ಲಿ ಇಂದಿಗೂ ಯುವಕರು, ಮಕ್ಕಳು ಮೆನೆಯೊಳಗಡೆ ಕ್ರಿಕೆಟ್ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಡುವುದು ಸಾಮಾನ್ಯವಾಗಿದೆ. ಆದರೆ, ಇದು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೂ ಇಂದು ಬಂದು ಮುಟ್ಟಿದೆ. ಕೊರೊನಾ ದಾಳಿಯಿಂದಾಗಿ ಮನೆಯನ್ನೇ ಆಟದ ಮೈದಾನವನ್ನಾಗಿಸುವ ಅನುವಾರ್ಯ ಎದುರಾಗಿದೆ.
ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದ ಬಹುತೇಕ ಎಲ್ಲಾ ಕ್ರೀಡಾ ಕಾರ್ಯಕ್ರಮಗಳು ರದ್ದಾಗಿದ್ದರೆ, ಮತ್ತೆ ಕೆಲವು ಮುಂದೂಡಲ್ಪಟ್ಟಿವೆ. ಇತ್ತ ಭಾರತೀಯ ಕ್ರಿಕೆಟಿಗರೂ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಇದೀಗ ಹವ್ಯಾಸ ಆಸಕ್ತಿಯನ್ನು ಮನೆಯಲ್ಲೇ ನಡೆಸಬೇಕಾದ ಅನಿವಾರ್ಯತೆ ಎದುರಾದ ಸಂದರ್ಭದಲ್ಲಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಇಂಡೋರ್ ಕ್ರಿಕೆಟ್ ಆಡಲು ತಮ್ಮ ಮನೆಯ ಕೊಠಡಿಯನ್ನೇ ಸ್ಟೇಡಿಯಂ ಆಗಿ ಪರಿವರ್ತಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ಎಲ್ಲರೂ ಸುರಕ್ಷಿತರಾಗಿರಿ, ಹೊರಗೆ ಹೋಗುವುದನ್ನು ತಪ್ಪಿಸಿ. ಎಲ್ಲರೂ ಮನೆಯಲ್ಲೇ ಇದ್ದುಕೊಂಡು ಹಾಯಾಗಿರಿ ಎಂದು ತಿಳಿಸುವ ಮೂಲಕ ಕೊರೊನಾ ಮಹಾಮಾರಿಯ ಎಫೆಕ್ಟ್ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.