ನವದೆಹಲಿ, ಮಾ 27 (DaijiworldNews/SM): ವಿಶ್ವದೆಲ್ಲೆಡೆ ಕೊರೊನಾ ಮಾಹಾಮಾರಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರ ನಿಯಂತ್ರಣಕ್ಕೆ ಹತ್ತು ಹಲವು ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ನಿಯಂತ್ರಣಕ್ಕೆ ತರಲು ಕಷ್ಟ ಸಾಧ್ಯವಾಗುತ್ತಿದೆ. ಇದೀಗ ಇದರ ಎಫೆಕ್ಟ್ ಟಿ-20 ವಿಶ್ವಕಪ್ ಮೇಲೂ ತಟ್ಟಿದೆ.
ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಪುರುಷರ ವಿಶ್ವಕಪ್ ನಿಗದಿ ಪಡಿಸಿರುವ ಸಮಯದಲ್ಲಿ ನಡೆಯದು ಎನ್ನಲಾಗಿದೆ. ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 24 ರಿಂದ ನವಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ ಈ ಟೂರ್ನಿಯ ಮೇಲೂ ಕೊರೊನಾ ಭೀತಿ ಎದುರಾಗುತ್ತಿದೆ.
ಕೊರೊನಾದಿಂದಾಗಿ ಈಗಾಗಲೇ ಹಲವು ಕ್ರಿಕೆಟ್ ಟೂರ್ನಿಗಳು ಈಗಾಗಲೇ ದೇಶದಲ್ಲಿ ಸ್ಥಗಿತಗೊಂಡಿವೆ. ಇದೀಗ ಪುರುಷರ ಟಿ-೨೦ ಮೇಲೂ ಕೊರೊನಾ ಕರಿನೆರಳು ಬೀರುವ ಸಾಧ್ಯತೆ ಹೆಚ್ಚಾಗಿದೆ.
ವಿಶ್ವಕಪ್ ರದ್ದುಪಡಿಸುವ ಬಗ್ಗೆ ಐಸಿಸಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಈ ವರ್ಷ ಪಂದ್ಯಾವಳಿ ನಡೆಯದಿದ್ದರೆ ಅದನ್ನು 2021 ರಲ್ಲಿ ನಡೆಸಲು ಅವಕಾಶವಿದೆ. ಮತ್ತು 2021 ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಅನ್ನು 2022 ರ ಅಕ್ಟೋಬರ್ ವರೆಗೆ ಮುಂದೂಡಲು ಅವಕಾಶವಿದೆ.