ನವದೆಹಲಿ, ಮಾ.21 (DaijiworldNews/PY) : 2011 ಮಾರ್ಚ್ 20 ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯ ದಿನ. ಯುವರಾಜ್ ಸಿಂಗ್ ಅನಾರೋಗ್ಯದ ಮಧ್ಯೆಯೂ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಸ್ಫೋಟಕ ಪ್ರದರ್ಶನ ನೀಡಿ, ಶತಕ ಸಿಡಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದ ದಿನವಾಗಿದೆ.
ಈ ವಿಶ್ವಕಪ್ ಪಂದ್ಯಾಟವು ಚೆನ್ನೈಯಲ್ಲಿ ನಡೆದಿದ್ದು, ಅನಾರೋಗ್ಯದ ನಡುವೆಯೂ ಯುವರಾಜ್ ಸಿಂಗ್ ವೆಸ್ಟ್ ಇಂಡೀಸ್ ವಿರುದ್ದ ನಡೆದ ಪಂದ್ಯಾಟದಲ್ಲಿ ಸ್ಪೋಟಕ ಪ್ರದರ್ಶನ ನೀಡಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಪಡೆದುಕೊಂಡ ಭಾರತ ಪ್ರಾರಂಭದಲ್ಲಿ 2 ವಿಕೆಟ್ ಕಳೆದುಕೊಂಡು ಪೇಚಿಗೆ ಸಿಲುಕಿತ್ತು. ಆ ಸಂದರ್ಭ ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಆಧಾರವಾಗಿದ್ದರು. ಈ ಜೋಡಿ 3ನೇ ವಿಕೆಟ್ಗೆ 122 ರನ್ ಕಲೆಹಾಕಿತ್ತು. ಯುವರಾಜ್ ಸಿಂಗ್ 123 ಎಸೆತಗಳನ್ನು ಎದುರಿಸಿ 113 ರನ್ ದಾಖಲಿಸಿದ್ದರು. ಯುವರಾಜ್ ಸಿಂಗ್ ವಿಶ್ವಕಪ್ನಲ್ಲಿ ಬಾರಿಸಿದ ಪ್ರಥಮ ಹಾಗೂ ಏಕೈಕ ಶತಕವಾಗಿದೆ. ಭಾರತವು ಯುವರಾಜ್ ಸಿಂಗ್ ಅವರ ಸಾಹಸದಿಂದ 268 ರನ್ ದಾಖಲಿಸುವಲ್ಲಿ ಸಫಲವಾಯಿತು.
ಯುವರಾಜ್ ಸಿಂಗ್ ಬೌಲಿಂಗ್ನಲ್ಲೂ ಮಿಂಚಿದ್ದು, ಕೇವಲ 18 ರನ್ ನೀಡಿ 2 ವಿಕೆಟ್ ಪಡೆದುಕೊಂಡು ಪಂದ್ಯಶ್ರೇಷ್ಠ ಗೌರವ ಗಿಟ್ಟಿಸಿಕೊಂಡರು. ಈ ಪಂದ್ಯದಲ್ಲಿ ಭಾರತ 80 ರನ್ಗಳ ಭರ್ಜರಿ ಗೆಲುವು ಪಡೆದಿತ್ತು.
ಬೌಲಿಂಗ್ನಲ್ಲೂ ವಿಂಚಿದ ಯುವಿ ಕೇವಲ 18 ರನ್ ನೀಡಿ 2 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಭಾರತ ಈ ಪಂದ್ಯದಲ್ಲಿ 80 ರನ್ಗಳ ಗೆಲುವು ಸಾಧಿಸಿತು.
ಈ ಪಂದ್ಯ ಬಗ್ಗೆ 2014ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಸಂದರ್ಭ ಯುವಿ ಮಾತನಾಡಿದ್ದರು, ನಾನು ಪಂದ್ಯದ ನಂತರ ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ ಎನ್ನುವುದು ನನ್ನ ಹಾರೈಕೆಯಾಗಿದ್ದು ಎಂದು ತಿಳಿಸಿದ್ದರು.
ನಾನು ಯಾವಾಗಲೂ ವಿಶ್ವಕಪ್ನಲ್ಲಿ ಶತಕ ಬಾರಿಸಬೇಕೆಂದುಕೊಳ್ಳುತ್ತಿದ್ದೆ. ಆದರೆ, 6ನೇ ಕ್ರಮಾಂಕದಲ್ಲಿ ನಾನು ಬ್ಯಾಂಟಿಂಗ್ ಮಾಡುತ್ತಿದ್ದ ಕಾರಣ ಶತಕ ಬಾರಿಸುವ ಆಸೆ ಸಾಧ್ಯವಾಗುತ್ತಿರಲಿಲ್ಲ. ಕೊನೆಗೂ ಶತಕ ಬಾರಿಸುವ ನನ್ನ ಕನಸು ನನಸಾಯಿತು. ಚೆನ್ನೈನಲ್ಲಿ ಉಷ್ಣಾಂಶ ಅಧಿಕವಿರುವ ಕಾರಣದಿಂದ ನನಗೆ ವಾಂತಿಯಾಗಿರಬಹುದು ಎಂದು ಮೊದಲು ಅಂದುಕೊಂಡಿದ್ದೆ. ನಾನು ಆ ಪಂದ್ಯದ ನಂತರ ಸತ್ತರೂ ಭಾರತ ವಿಶ್ವಕಪ್ ಗೆಲ್ಲಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೆ ಎಂದು ಯುವರಾಜ್ ಸಿಂಗ್ ಹೇಳಿಕೊಂಡಿದ್ದರು.