ಮೆಲ್ಬೊರ್ನ್, ಫೆ 27 (DaijiworldNews/SM): ಮೂರನೇ ಟಿ-20 ಪಂದ್ಯದಲ್ಲೂ ಪ್ರಬಲ್ಯ ಮೆರೆಯುವ ಮೂಲಕ ಭಾರತೀಯ ವನಿತಾ ತಂಡ ಟಿ-20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೆ ಎಂಟ್ರಿ ಪಡೆದುಕೊಂಡಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತೀಯ ವನಿತಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಕೇವಲ ನಾಲ್ಕು ರನ್ ಗಳ ವಿರೋಚಿತ ಸೋಲು ಅನುಭವಿಸಿತು.
ಇನ್ನು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ 34 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರ್ ನೆರವಿನಿಂದ 46 ರನ್ ಗಳಿಸಿದರೆ, ತನಿಯಾ ಭಾಟಿಯಾ 23 ರನ್ ಗಳ ಕೊಡುಗೆ ನೀಡಿದರು. ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಅಂತಿಮವಾಗಿ ನ್ಯೂಜಿಲ್ಯಾಂಡ್ ತಂಡಕ್ಕೆ ಗೆಲ್ಲಲು 133 ರನ್ ಗಳ ಗುರಿ ನೀಡಿತು.
ಭಾರತ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ರಚೆಲ್ ಪ್ರಿಸ್ಟ್ 12, ಸೊಪಿ ಡೆವಿನ್ 14, ಮ್ಯಾಡಿ ಗ್ರೀನ್ 24, ಮಾರ್ಟಿನ್ 25, ಅಮೆಲಿಯಾ 34 ರನ್ ಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು. ಆದರೆ, ಅಂತಿಮವಾಗಿ 4 ರನ್ ಗಳ ವಿರೋಚಿತ ಸೋಲನುಭವಿಸಿ ಭಾರತ ತಂಡಕ್ಕೆ ಶರಣಾಯಿತು.
ನ್ಯೂಜಿಲ್ಯಾಂಡ್ ವಿರುದ್ಧದ ಗೆಲುವಿನ ಮೂಲಕ ಭಾರತೀಯ ವನಿತಾ ತಂಡ ನಿರಂತರ ಮೂರನೇ ಗೆಲುವನ್ನು ದಾಖಲಿಸಿದಂತಾಗಿದ್ದು, ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಹಾಗೂ ಸೆಮಿಫೈನಲ್ ಗೆ ಎಂಟ್ರಿಪಡೆದುಕೊಂಡಿದೆ.